Publish Date: Thu, 18 Jan 2024 (11:12 IST)
Updated Date: Thu, 18 Jan 2024 (11:15 IST)
ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೃದಯದಿಂದಲೂ ಎಷ್ಟು ಶ್ರೀಮಂತ ಎನ್ನುವುದಕ್ಕೆ ಇದೇ ಸಾಕ್ಷಿ.
ಇಂಧೋರ್ ನಲ್ಲಿ ರೋಹಿತ್ ಶರ್ಮಾ ತನ್ನ ಕನಸು ನನಸು ಮಾಡಿದ ಬಗ್ಗೆ ಸಂಚಾರಿ ಪೊಲೀಸ್ ಅಧಿಕಾರಿ ರಂಜಿತ್ ಎಂಬವರು ಹೇಳಿಕೊಂಡಿದ್ದಾರೆ. ರೋಹಿತ್ ರ ಕಟ್ಟಾ ಅಭಿಮಾನಿಯಾಗಿರುವ ಪೊಲೀಸ್ ಅಧಿಕಾರಿ ರಂಜಿತ್ ತಮಗೆ ಆಟೋಗ್ರಾಫ್ ಜೊತೆ ಸಂದೇಶವೊಂದನ್ನು ನೀಡಿರುವುದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ರೋಹಿತ್ ಶರ್ಮಾ ಟಿ20 ಪಂದ್ಯವಾಡಲು ಇಂಧೋರ್ ಗೆ ಬಂದಿದ್ದಾಗ ಅವರ ಬಳಿ ಆಟೋಗ್ರಾಫ್ ನೀಡುವಂತೆ ರಂಜಿತ್ ಕೇಳಿಕೊಂಡಿದ್ದರಂತೆ. ಆದರೆ ಆಗ ಅವರಿಗೆ ಆಟೋಗ್ರಾಫ್ ನೀಡಲು ಆಗಿರಲಿಲ್ಲ.
ಆದರೆ ರಂಜಿತ್ ಆಸೆಯನ್ನು ನಿರಾಸೆ ಮಾಡದ ರೋಹಿತ್ ಶರ್ಮಾ ಇದಕ್ಕಾಗಿ ತಮ್ಮ ಬಸ್ ಡ್ರೈವರ್ ಸಹಾಯ ಪಡೆದಿದ್ದರಂತೆ. ಬಸ್ ಡ್ರೈವರ್ ಮೂಲಕ ಆಟೋಗ್ರಾಫ್ ಮತ್ತು ನಿಮ್ಮ ಉತ್ಸಾಹ ತುಂಬಾ ಇಷ್ಟವಾಯಿತು. ನಿಮಗೆ ಯಶಸ್ಸು ಸಿಗಲಿ ಎಂದು ಹಾರೈಸಿ ಸಂದೇಶವೊಂದನ್ನು ಬರೆದು ಕಳುಹಿಸಿದ್ದರಂತೆ. ಈ ಸಂದೇಶವನ್ನು ರಂಜಿತ್ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡು ಖುಷಿಪಟ್ಟಿದ್ದಾರೆ.