Publish Date: Fri, 19 Jan 2024 (09:45 IST)
Updated Date: Fri, 19 Jan 2024 (09:47 IST)
ಅಯೋಧ್ಯೆ: ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವ ರಾಮಲಲ್ಲಾ ಮೂರ್ತಿಯನ್ನು ಮೊದಲ ಬಾರಿಗೆ ಅನಾವರಣಗೊಳಿಸಲಾಗಿದೆ.
ಅಯೋಧ್ಯೆಯ ರಾಮಮಂದಿರ ಗರ್ಭ ಗುಡಿಯಲ್ಲಿ ನಿನ್ನೆ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಪೂಜಾ ವಿಧಿ ವಿಧಾನಗಳ ನಂತರ ರಾಮಲಲ್ಲಾನ ಮೂರ್ತಿಯ ಫೋಟೋ ಅನಾವರಣಗೊಳಿಸಲಾಗಿದೆ.
ಇಂದು ಬಾಲ ರಾಮನ ವಿಗ್ರಹ ಶುಚಿಗೊಳಿಸುವ ಪ್ರಕ್ರಿಯೆ ನಡೆಯಲಿದೆ. ಮೊದಲು ಕೇಸರಿಯಲ್ಲಿ ಮುಳುಗಿಸಿ ಶುದ್ಧೀಕರಣ ಮಾಡಲಾಗುತ್ತದೆ. ಬಳಿಕ ತುಪ್ಪದಲ್ಲಿ ಮುಳುಗಿಸುವ ಪ್ರಕ್ರಿಯೆ ನಡೆಯಲಿದೆ. ಕೊನೆಯದಾಗಿ ಧಾನ್ಯಗಳಲ್ಲಿ ವಿಗ್ರಹವನ್ನು ಮುಳುಗಿಸಿ ಶುದ್ಧೀಕರಣಗೊಳಿಸಲಾಗುತ್ತದೆ.
ಮೈಸೂರಿನ ಅರುಣ್ ಯೋಗಿರಾಜ್ ವಿಗ್ರಹ ಕೆತ್ತನೆ ಮಾಡಿರುವುದು ನಮ್ಮೆಲ್ಲರಿಗೂ ಹೆಮ್ಮೆ. ಅವರ ನೇತೃತ್ವದಲ್ಲಿಯೇ ಮೊನ್ನೆ ರಾಮಮಂದಿರಕ್ಕೆ ವಿಗ್ರಹ ತರಲಾಗಿತ್ತು.