Publish Date: Wed, 17 Jan 2024 (09:39 IST)
Updated Date: Wed, 17 Jan 2024 (09:42 IST)
ಮುಂಬೈ: ಜನವರಿ 22 ರಂದು ನಡೆಯಲಿರುವ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ರಾಮ ಜನ್ಮಭೂಮಿ ಟ್ರಸ್ಟ್ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾಗೆ ಆಹ್ವಾನ ಪತ್ರಿಕೆ ನೀಡಿದೆ.
ಈಗಾಗಲೇ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಗಣ್ಯಾತಿಗಣ್ಯರನ್ನು ಖುದ್ದಾಗಿ ರಾಮಜನ್ಮಭೂಮಿ ಟ್ರಸ್ಟ್ ಮನೆಗೆ ತೆರಳಿ ಆಹ್ವಾನ ಪತ್ರಿಕೆ ವಿತರಿಸುತ್ತಿದೆ. ಇದೀಗ ಕೊಹ್ಲಿ ದಂಪತಿಯ ನಿವಾಸಕ್ಕೆ ಭೇಟಿ ನೀಡಿ ಅವರನ್ನೂ ಆಹ್ವಾನಿಸಿದ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟವಾಗಿದೆ.
ಆದರೆ ಈ ಫೋಟೋದಲ್ಲಿ ಎಲ್ಲರ ಕಣ್ಣು ಅನುಷ್ಕಾ ಹೊಟ್ಟೆ ಮೇಲೆಯೇ ಇದೆ. ಕಳೆದ ಕೆಲವು ಸಮಯದಿಂದ ಅನುಷ್ಕಾ ಎರಡನೇ ಬಾರಿಗೆ ತಾಯಿಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಲೇ ಇದೆ. ಆದರೆ ದಂಪತಿ ಈ ಸುದ್ದಿಯನ್ನು ಒಪ್ಪಿಕೊಂಡೂ ಇಲ್ಲ, ಅಲ್ಲಗಳೆದೂ ಇಲ್ಲ.
ಆಗಾಗ ಕೊಹ್ಲಿ ಕೌಟುಂಬಿಕ ಕಾರಣ ನೀಡಿ ಮನೆಗೆ ತೆರಳುತ್ತಿರುವುದನ್ನು ನೋಡಿದರೆ ಇದು ಪಕ್ಕಾ ಎನಿಸುತ್ತದೆ. ಇದರ ಜೊತೆಗೆ ಅನುಷ್ಕಾ ಇತ್ತೀಚೆಗೆ ಹೊರಗೆಲ್ಲೂ ಕಾಣಿಸುವುದು ಅಪರೂಪವಾಗಿದೆ. ಕಾಣಿಸಿಕೊಂಡರೂ ಹೆಚ್ಚಾಗಿ ಸಡಿಲ ಉಡುಗೆ ಧರಿಸಿ ಉಬ್ಬು ಹೊಟ್ಟೆ ಕಾಣದಂತೆ ಮರೆಮಾಚುತ್ತಿರುವುದು ಅನುಮಾನ ಹೆಚ್ಚಿಸಿದೆ.