ಹೈದರಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಾಳೆಯಿಂದ ಟೆಸ್ಟ್ ಸರಣಿಯ ಮೊದಲ ಪಂದ್ಯ ಹೈದರಾಬಾದ್ ನಲ್ಲಿ ಆರಂಭವಾಗುತ್ತಿದೆ.
ಆದರೆ ಈ ಪಂದ್ಯಕ್ಕೆ ಟೀಂ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಗೈರಾಗಿದ್ದಾರೆ. ಹೀಗಾಗಿ ತಂಡದ ಪ್ಲೇಯಿಂಗ್ ಇಲೆವೆನ್ ನಲ್ಲಿ ಕೊಹ್ಲಿ ಸ್ಥಾನಕ್ಕೆ ಬರುವವರು ಯಾರು ಎಂಬ ಪ್ರಶ್ನೆ ಮೂಡಿದೆ.
ಈಗಾಗಲೇ ಟೆಸ್ಟ್ ಮಾದರಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಆಗಿರಲ್ಲ ಎಂದು ಮ್ಯಾನೇಜ್ ಮೆಂಟ್ ಸುಳಿವು ನೀಡಿದೆ. ಹೀಗಾಗಿ ಕೆಎಸ್ ಭರತ್ ಅವರನ್ನು ಹೆಚ್ಚುವರಿ ವಿಕೆಟ್ ಕೀಪರ್ ಆಗಿ ತಂಡದಲ್ಲಿ ಆಯ್ಕೆ ಮಾಡಲಾಗಿದೆ. ಹೀಗಾಗಿ ಅವರೇ ವಿಕೆಟ್ ಕೀಪರ್ ಆಗಿ ಕಣಕ್ಕಿಳಿಯಬಹುದು.
ಹೀಗಾದಲ್ಲಿ ಕೊಹ್ಲಿ ಸ್ಥಾನಕ್ಕೆ ಭರತ್ ಆಯ್ಕೆಯಾಗಲಿದ್ದಾರೆ. ಕೊಹ್ಲಿಯ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಕಣಕ್ಕಿಳಿಯಬಹುದು. ಒಂದು ವೇಳೆ ಕೊಹ್ಲಿ ತಂಡದಲ್ಲಿದ್ದಿದ್ದರೆ ಗಿಲ್ ಅಥವಾ ಜೈಸ್ವಾಲ್ ಸ್ಥಾನ ತ್ಯಾಗ ಮಾಡಬೇಕಾಗಿತ್ತು.