ಭಾರತೀಯ ಧ್ವಜ ನೆಲಕ್ಕೆ ತಾಗದಂತೆ ಎಚ್ಚರಿಕೆ ವಹಿಸಿದ ಧೋನಿ

ಸೋಮವಾರ, 11 ಫೆಬ್ರವರಿ 2019 (09:08 IST)
ಹ್ಯಾಮಿಲ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ತೃತೀಯ ಟಿ20 ಪಂದ್ಯದ ವೇಳೆ ಧೋನಿ ಭಾರತೀಯ ಧ್ವಜ ನೆಲಕ್ಕೆ ಬೀಳದಂತೆ ಜಾಣತನ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ಟೀಂ ಇಂಡಿಯಾ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಅಭಿಮಾನಿಯೊಬ್ಬ ಮೈದಾನಕ್ಕೆ ಓಡಿ ಬಂದು ಧೋನಿ ಕಾಲಿಗೆ ನಮಸ್ಕರಿಸಿದ್ದ. ಈ ವೇಳೆ ಅಭಿಮಾನಿಯ ಕೈಯಲ್ಲಿ ರಾಷ್ಟ್ರಧ್ವಜವಿತ್ತು.

ನಮಸ್ಕರಿಸುವ ವೇಳೆ ಅಭಿಮಾನಿಯ ಕೈಯಲ್ಲಿದ್ದ ಧ್ವಜ ಕೈಗೆ ತೆಗೆದುಕೊಂಡ ಧೋನಿ ರಾಷ್ಟ್ರಧ್ವಜ ಯಾವುದೇ ಕಾರಣಕ್ಕೂ ನೆಲಕ್ಕೆ ತಾಗದಂತೆ ಎಚ್ಚರಿಕೆ ವಹಿಸಿದ್ದಾರೆ. ಧೋನಿಯ ಈ ದೇಶಭಕ್ತಿಯ ನಡತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಖಲೀಲ್ ಅಹಮ್ಮದ್ ವಿರುದ್ಧ ಧೋನಿ ಪಕ್ಷಪಾತ ಮಾಡಿದರೇ?!