Select Your Language

Notifications

webdunia
webdunia
webdunia
webdunia

ಭಾರತ-ನ್ಯೂಜಿಲೆಂಡ್ ಟಿ20: ಸರಣಿ ಯಾರ ಪಾಲಿಗೆ?

ಭಾರತ-ನ್ಯೂಜಿಲೆಂಡ್ ಟಿ20: ಸರಣಿ ಯಾರ ಪಾಲಿಗೆ?
ಹ್ಯಾಮಿಲ್ಟನ್ , ಭಾನುವಾರ, 10 ಫೆಬ್ರವರಿ 2019 (08:10 IST)
ಹ್ಯಾಮಿಲ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಂದು ತೃತೀಯ ಟಿ20 ಪಂದ್ಯ ಇಂದು ನಡೆಯಲಿದ್ದು, ಇಂದು ಗೆದ್ದವರಿಗೆ ಸರಣಿ ಒಲಿಯಲಿದೆ.


ಈಗಾಗಲೇ ಎರಡೂ ತಂಡಗಳು ಒಂದೊಂದು ಗೆಲುವು ಸಾಧಿಸಿ ಸರಣಿ 1-1 ರಿಂದ ಸಮಬಲಗೊಳಿಸಿದೆ. ಹೀಗಾಗಿ ಇಂದಿನ ಅಂತಿಮ ಪಂದ್ಯಕ್ಕೆ ಫೈನಲ್ ಕಳೆ ಬಂದಿದೆ.

ಅತ್ತ ನ್ಯೂಜಿಲೆಂಡ್ ಕಳೆದ ಪಂದ್ಯಕ್ಕೆ ಸೇಡು ತೀರಿಸಿಕೊಳ‍್ಳುವ ವಿಶ್ವಾಸದಲ್ಲಿದೆ. ಆಸ್ಟ್ರೇಲಿಯಾದಂತೆ ಟೀಂ ಇಂಡಿಯಾಕ್ಕೆ ನ್ಯೂಜಿಲೆಂಡ್ ಸುಲಭ ತುತ್ತಾಗಲಿಲ್ಲ. ಎಲ್ಲಾ ವಿಭಾಗದಲ್ಲೂ ಸ್ಪರ್ಧೆ ಒಡ್ಡಿದೆ. ಹೀಗಾಗಿ ಆರಂಭದಲ್ಲೇ ವಿಕೆಟ್ ಕೀಳಬೇಕು. ಹಾಗೆಯೇ ಬ್ಯಾಟಿಂಗ್ ನಲ್ಲೂ ಉತ್ತಮ ಜತೆಯಾಟಗಳು ಬರಬೇಕು.

ಮೊದಲೆರಡು ಪಂದ್ಯದಲ್ಲಿ ಆಡಿದ ಆಟಗಾರರೇ ಈ ಪಂದ್ಯದಲ್ಲೂ ಆಡುವ ಸಾಧ‍್ಯತೆ ಹೆಚ್ಚಿದೆ. ಒಂದು ವೇಳೆ ಬದಲಾವಣೆ ಮಾಡುವುದಿದ್ದರೆ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಮಾಡಬಹುದು. ಅದು ಬಿಟ್ಟರೆ ಬ್ಯಾಟಿಂಗ್ ನಲ್ಲಿ ಯಾವುದೇ ಬದಲಾವಣೆ ಸಾಧ‍್ಯತೆಯಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ನ್ಯೂಜಿಲೆಂಡ್ ಮೈದಾನದಲ್ಲಿ ಭಾರತೀಯ ಅಭಿಮಾನಿಗಳದ್ದೇ ಕಾರುಬಾರು!