Publish Date: Sat, 09 Feb 2019 (10:02 IST)
Updated Date: Sat, 09 Feb 2019 (10:03 IST)
ಆಕ್ಲೆಂಡ್: ಧೋನಿ ವಿಕೆಟ್ ಹಿಂದುಗಡೆ ನಿಂತರೆ ಎಂತಹಾ ಚಾಣಕ್ಷ್ಯ ಎನ್ನುವುದು ಜಗತ್ತಿಗೇ ಗೊತ್ತು. ಆದರೆ ಈ ವಿಕೆಟ್ ಕೀಪರ್ ತಜ್ಞನನ್ನೇ ವಂಚಿಸಲು ಬಂದರೆ ಅವರು ಸುಮ್ಮನೇ ಬಿಡುತ್ತಾರಾ?
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿತೀಯ ಟಿ20 ಪಂದ್ಯದಲ್ಲಿ ಇದೇ ಕತೆ ಆಗಿದೆ. ಬ್ಯಾಟಿಂಗ್ ಮಾಡುತ್ತಿದ್ದ ಧೋನಿಯನ್ನು ಸ್ಟಂಪ್ ಔಟ್ ಮಾಡಲು ನ್ಯೂಜಿಲೆಂಡ್ ಬೌಲರ್ ಮತ್ತು ಕೀಪರ್ ಮಾಡಿದ ಪ್ಲ್ಯಾನ್ ಗೆ ತಿರುಗೇಟು ನೀಡಿದ್ದಾರೆ.
ಧೋನಿ ಕ್ರೀಸ್ ಬಿಟ್ಟು ಬ್ಯಾಟಿಂಗ್ ಮಾಡುತ್ತಿರುವುದನ್ನು ಗಮನಸಿದ ಬೌಲರ್ ಸೋದಿ ಬೇಕೆಂದೇ ಸ್ಟಂಪ್ ಔಟ್ ಮಾಡಲು ಸಹಾಯವಾಗುವಂತೆ ಬಾಲ್ ಎಸೆದಿದ್ದಾರೆ. ಆದರೆ ಬೌಲರ್ ನ ಉದ್ದೇಶ ಅರಿತ ಧೋನಿ ಚೆಂಡು ಬ್ಯಾಟ್ ಗೆ ಸಿಗದೇ ಇದ್ದಾಗ ಗ್ಲೌಸ್ ಮೂಲಕ ತಳ್ಳಿ ಸ್ಟಂಪ್ ಔಟ್ ನಿರಾಕರಿಸಿದ್ದಲ್ಲದೆ, ಸಿಂಗಲ್ ರನ್ ಕೂಡಾ ಕಬಳಿಸಿದರು. ಧೋನಿ ಈ ಬುದ್ಧಿವಂತಿಕೆ ನೋಡಿ ಟ್ವಿಟರಿಗರು ಕೊಂಡಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ