ನ್ಯೂಜಿಲೆಂಡ್ ಮೈದಾನದಲ್ಲಿ ಭಾರತೀಯ ಅಭಿಮಾನಿಗಳದ್ದೇ ಕಾರುಬಾರು!

ಭಾನುವಾರ, 10 ಫೆಬ್ರವರಿ 2019 (07:57 IST)
ಆಕ್ಲೆಂಡ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಟಿ20 ಸರಣಿಯಲ್ಲಿ ಟೀಂ ಸ್ಥಳೀಯ ಪ್ರೇಕ್ಷಕರಿಗಿಂತ ಭಾರತೀಯ ಅಭಿಮಾನಿಗಳೇ ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿ ಅತಿಥೇಯರಿಗೆ ಶಾಕ್ ಕೊಟ್ಟಿದ್ದಾರೆ.


ದ್ವಿತೀಯ ಪಂದ್ಯ ಮುಗಿದ ಮೇಲೆ ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ನಥಮ್ ಮೆಕ್ಕಲಂ ಭಾರತೀಯ ಅಭಿಮಾನಿಗಳ ಹಾಜರಾತಿ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ನಾನು ಭಾರತೀಯ ಮೈದಾನದಲ್ಲಿದ್ದೇನೆ ಎಂಬ ಭಾವನೆ ಮೂಡಿತು ಎಂದಿದ್ದಾರೆ.

ನ್ಯೂಜಿಲೆಂಡ್ ನಲ್ಲೇ ಪಂದ್ಯ ನಡೆಯುತ್ತಿದ್ದರೂ ಅಲ್ಲಿನ ಅಭಿಮಾನಿಗಳಿಗಿಂತ ಹೆಚ್ಚು ಸಂಖ್ಯೆಯಲ್ಲಿ ಹಾಜರಿದ್ದು, ಭಾರತೀಯ ರಾಷ್ಟ್ರಧ್ವಜವನ್ನು ಹಾರಿಸುತ್ತಾ ಕಿರುಚಾಡಿ ಟೀಂ ಇಂಡಿಯಾಕ್ಕೆ ಪ್ರೋತ್ಸಾಹ ನೀಡುವ ಅಭಿಮಾನಿಗಳನ್ನು ಕಂಡು ಅತಿಥೇಯ ತಂಡ ದಂಗಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರೋಹಿತ್ ಶರ್ಮಾಗೆ ಟಿ20 ಯಲ್ಲಿ ಸಿಕ್ಸರ್ ಕಿಂಗ್ ಆಗುವ ಅವಕಾಶ!