ಹ್ಯಾಮಿಲ್ಟನ್: ಸಾಮಾನ್ಯವಾಗಿ ವಿಕೆಟ್ ಹಿಂದುಗಡೆ ನಿಂತು ಧೋನಿ ಬೌಲರ್ ಗಳಿಗೆ ಸಲಹೆ ಸೂಚನೆ ನೀಡುತ್ತಲೇ ಇರುತ್ತಾರೆ. ಆದರೆ ಈ ಬಾರಿ ಧೋನಿ ವೇಗಿಗಳಿಗೆ ಸಲಹೆ ನೀಡುತ್ತಿಲ್ಲ ಎಂಬ ಕಾರಣಕ್ಕೆ ಅವರ ಮೇಲೆ ಅಭಿಮಾನಿಗಳು ಗಂಭೀರ ಆರೋಪ ಮಾಡಿದ್ದಾರೆ.
ಧೋನಿ ತಮ್ಮ ಮೆಚ್ಚಿನ ಸ್ಪಿನ್ನರ್ ಗಳಿಗೆ ಮಾತ್ರ ಸಲಹೆ ನೀಡುತ್ತಾರೆ. ಆದರೆ ವೇಗಿಗಳಿಗೆ ಸೂಚನೆ ನೀಡಲ್ಲ ಎಂದು ಒಬ್ಬರು ಟ್ವಿಟರ್ ನಲ್ಲಿ ಆರೋಪಿಸಿದ್ದಾರೆ.
ಇನ್ನೊಬ್ಬರು ಖಲೀಲ್ ಅಹಮ್ಮದ್ ವಿರುದ್ಧ ಧೋನಿ ಮತ್ತು ಟೀಂ ಇಂಡಿಯಾ ಆಟಗಾರರು ಆತ ಮುಸ್ಲಿಂ ಎಂಬ ಕಾರಣಕ್ಕೆ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಈ ಆರೋಪಗಳು ಅಭಿಮಾನಿಗಳ ಅಭಿಪ್ರಾಯಗಳಷ್ಟೇ. ಹಾಗಿದ್ದರೂ ಅಭಿಮಾನಿಗಳ ಆರೋಪ ಚರ್ಚಾಸ್ಪದವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ