ಸರಣಿ ಗೆಲ್ಲದ ನಿರಾಸೆಯಲ್ಲಿ ರೋಹಿತ್ ಶರ್ಮಾ ಹೇಳಿದ್ದೇನು ಗೊತ್ತಾ?

ಭಾನುವಾರ, 10 ಫೆಬ್ರವರಿ 2019 (18:51 IST)
ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಸೋತ ನಿರಾಶೆ ರೋಹಿತ್ ಶರ್ಮಾ ಮಾತಿನಲ್ಲಿ ಎದ್ದು ಕಾಣುತ್ತಿತ್ತು. ಅದೂ ಕೈಗೆ ಬಂದ ತುತ್ತು ಬಾಯಿಗೆ ಬರದ ನಿರಾಶೆ ಅವರನ್ನು ಕಾಡಿದೆ.


ತೃತೀಯ ಮತ್ತು ನಿರ್ಣಾಯಕ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ 213 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ಭಾರತ ಕೇವಲ 4 ರನ್ ಗಳಿಂದ ಸೋಲು ಮೈಮೇಲೆಳೆದುಕೊಂಡಿದೆ. ರೋಚಕವಾಗಿದ್ದ ಪಂದ್ಯದಲ್ಲಿ ಭಾರತ ನಿಗದಿತ 20 ಓವರ್ ಗಳಲ್ಲಿ 208 ರನ್ ಗಳಿಸಲಷ್ಟೇ ಶಕ್ತವಾಯಿತು.

ಸರಣಿ ಸೋತ ಬೇಸರದಲ್ಲಿದ್ದ ರೋಹಿತ್ ಶರ್ಮಾ ಗೆಲುವಿನ ಅವಕಾಶವಿದ್ದಾಗ ಸೋತಿದ್ದು ಭಾರೀ ನಿರಾಸೆ ತಂದಿದೆ. ಆದರೆ ಈ ಸರಣಿಯಿಂದ ಕಳೆದುಕೊಂಡಿದ್ದಕ್ಕಿಂತ ಹೆಚ್ಚು ಸಕಾರಾತ್ಮಕ ಅಂಶಗಳನ್ನು ಗಳಿಸಿಕೊಂಡಿದ್ದೇವೆ ಎಂದು ರೋಹಿತ್ ಹೇಳಿದ್ದಾರೆ. ಅದೇನೇ ಇದ್ದರೂ ನ್ಯೂಜಿಲೆಂಡ್ ನಲ್ಲಿ ಟಿ20 ಸರಣಿ ಗೆಲ್ಲುವ ಕನಸು ನನಸಾಗದೇ ಟೀಂ ಇಂಡಿಯಾ ತವರಿಗೆ ಮರಳಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಸಭ್ಯ ಬಗ್ಗೆ ಕಾಮೆಂಟ್ ಮಾಡಿದ್ದಕ್ಕೆ ಹಾರ್ದಿಕ್ ಪಾಂಡ್ಯಗೆ ಬ್ಯಾನರ್ ಹಿಡಿದು ಲೇವಡಿ ಮಾಡಿದ ಮಹಿಳೆ!