Select Your Language

Notifications

webdunia
webdunia
webdunia
webdunia

IND VS SA: ಟಾಸ್ ಸೋತರು ಭಾರತಕ್ಕೆ ಸವಾಲಿನ ಗುರಿ ನೀಡಿದ ದಕ್ಷಿಣ ಆಫ್ರಿಕಾ

India vs South Africa Odi Live

Sampriya

ವಿಶಾಖಪಟ್ಟಣ , ಶನಿವಾರ, 6 ಡಿಸೆಂಬರ್ 2025 (17:50 IST)
Photo Credit X
ವಿಶಾಖಪಟ್ಟಣ: ಇಲ್ಲಿ ಭಾರತ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 47.5 ಓವರ್‌ಗಳಲ್ಲಿ ಆಲ್ ಔಟ್ ಆಗಿ 270 ರನ್‌ ಗಳಿಸಿತು. ಈ ಮೂಲಕ ಭಾರತಕ್ಕೆ ದಕ್ಷಿಣ ಆಫ್ರಿಕಾ ಸವಾಲಿನ ಗುರಿಯನ್ನು ನೀಡಿದೆ. 

ದಕ್ಷಿಣ ಆಫ್ರಿಕಾ ತಂಡಕ್ಕೆ ಅರ್ಶದೀಪ್‌ ಸಿಂಗ್‌ ಅವರು ಹೊಸ ಚೆಂಡಿನಲ್ಲೇ ಆರಂಭದಲ್ಲೇ ಆಘಾತ ನೀಡಿದರು.  ರಿಕಲ್ಟನ್‌ ಅವರು ಅರ್ಶದೀಪ್‌ ಎಸೆತದಲ್ಲಿ ರಾಹುಲ್‌ಗೆ ಕ್ಯಾಚ್‌ ನೀಡುವ ಮೂಲಕ ಡಕ್‌ ಔಟ್ ಆಗಿ ಪೆವಿಲಿಯನ್‌ ಕಡೆ ಮುಖ ಮಾಡಿದರು.

ಇನ್ನೂ ಅಮೋಘ ಪ್ರದರ್ಶನದ ಮೂಲಕ ಕ್ವಿಂಟನ್ ಡಿ ಕಾಕ್ ಅವರು 80 ಎಸೆತದಲ್ಲಿ ಶತಕ ಸಿಡಿಸಿ, ಅದ್ಭುತ ಪ್ರದರ್ಶನ ನೀಡಿದರು.  89 ಎಸೆತಗಳಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್‌ ಸಹಿತ 106 ರನ್‌ ಗಳಿಸಿ ಪ್ರಸಿದ್ ಕೃಷ್ಣ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು.

ದಕ್ಷಿಣ ಆಫ್ರಿಕಾ ಪರ ನಾಯಕ ಬವುಮಾ 48 ರನ್ (67 ಎಸೆತ) ಗಳಿಸಿ ಜಡೇಜಗೆ ವಿಕೆಟ್‌ ಒಪ್ಪಿಸಿದರು. ಇನ್ನೂ ಕುಲ್‌ದೀಪ್ ನಾಲ್ಕು ವಿಕೆಟ್‌, ಪ್ರಸಿದ್ಧ್ ಕೃಷ್ಣ ನಾಲ್ಕು, ಆರ್ಶ್‌ದೀಪ್ ಸಿಂಗ್‌ ಒಂದು ಹಾಗೂ ರವೀಂದ್ರಾ ಜಡೇಜಾ ಒಂದು ವಿಕೆಟ್ ಪಡೆದರು. 

Share this Story:

Follow Webdunia kannada

ಮುಂದಿನ ಸುದ್ದಿ

IND vs SA: ಕೆಎಲ್ ರಾಹುಲ್ ಇಂದು ಟಾಸ್ ಗೆದ್ದಿದ್ದು ಹೇಗೆ, ಇಲ್ಲಿದೆ ರೋಚಕ ಕಹಾನಿ video