ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಇಂದು ಟೀಂ ಇಂಡಿಯಾ ಎರಡನೆಯ ಪಂದ್ಯವಾಡಲಿದ್ದು, ಅಫ್ಘಾನಿಸ್ತಾನ ಎದುರಾಳಿಯಾಗಿದೆ.
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿರುವ ಪಂದ್ಯ ಟೀಂ ಇಂಡಿಯಾಗೆ ರನ್ ರೇಟ್ ಹೆಚ್ಚಿಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ. ಕಳೆದ ಪಂದ್ಯದಲ್ಲಿ ಅಗ್ರ ಕ್ರಮಾಂಕದ ಬ್ಯಾಟಿಗರು ಕೈಕೊಟ್ಟಿದ್ದರು. ಹಿಂದಿನ ಪಂದ್ಯಗಳನ್ನು ಗಮನಿಸಿದರೆ ಈ ಮೈದಾನದಲ್ಲಿ ಹೈ ಸ್ಕೋರ್ ನಿರೀಕ್ಷಿಸಬಹುದು. ಹೀಗಾಗಿ ಇಂದು ಟಾಪ್ ಆರ್ಡರ್ ಸಿಡಿಯುವ ನಿರೀಕ್ಷೆಯಿದೆ. ಈ ಪಂದ್ಯಕ್ಕೆ ಭಾರತ ತಂಡದಲ್ಲಿ ಬದಲಾವಣೆಯ ಸಾಧ‍್ಯತೆ ಕಡಿಮೆ.
ಇನ್ನು, ಅಫ್ಘಾನಿಸ್ತಾನ ತಂಡಕ್ಕೂ ಇದು ಎರಡನೆಯ ಪಂದ್ಯ. ಕಳೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೋತಿದ್ದ ತಂಡ ಇಂದೂ ಗೆಲ್ಲುವುದು ಕಷ್ಟವೇ. ಈ ಪಂದ್ಯ ಅಪರಾಹ್ನ 2 ಗಂಟೆಗೆ ಆರಂಭವಾಗುವುದು.