Select Your Language

Notifications

webdunia
webdunia
webdunia
webdunia

ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಶುಬ್ಮನ್ ಗಿಲ್ ಆಸ್ಪತ್ರೆಗೆ ದಾಖಲು

ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಶುಬ್ಮನ್ ಗಿಲ್ ಆಸ್ಪತ್ರೆಗೆ ದಾಖಲು
ಚೆನ್ನೈ , ಮಂಗಳವಾರ, 10 ಅಕ್ಟೋಬರ್ 2023 (09:43 IST)
ಚೆನ್ನೈ: ಏಕದಿನ ವಿಶ್ವಕಪ್ ಗೆ ಮೊದಲು ಡೆಂಗ್ಯೂ ಜ್ವರಕ್ಕೆ ತುತ್ತಾದ ಟೀಂ ಇಂಡಿಯಾ ಸ್ಟಾರ್ ಬ್ಯಾಟಿಗ ಶುಬ್ಮನ್ ಗಿಲ್ ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇನ್ ಫಾರ್ಮ್ ಬ್ಯಾಟಿಗನಾಗಿದ್ದ ಗಿಲ್ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಿಂದ ಗೈರಾಗಿದ್ದರು. ಅವರ ಪ್ಲ್ಯಾಟ್ ಲೆಟ್ ಕೌಂಟ್ ಕಡಿಮೆಯಿರುವ ಕಾರಣಕ್ಕೆ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಅವರ ಆರೋಗ್ಯದ ಬಗ್ಗೆ ಅಪ್ ಡೇಟ್ ನೀಡಿರುವ ಬಿಸಿಸಿಐ, ಗಿಲ್ ಸದ್ಯಕ್ಕೆ ತಂಡದ ಜೊತೆ ದೆಹಲಿಗೆ ಪ್ರಯಾಣಿಸಿಲ್ಲ. ಚೆನ್ನೈನಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯಕೀಯ ತಂಡ ಅವರು ಸಂಪೂರ್ಣ ಫಿಟ್ ಎಂದು ಘೋಷಿಸುವವರೆಗೆ ಅವರು ಆಡಲ್ಲ. ಹೀಗಾಗಿ ಅಹಮ್ಮದಾಬಾದ್ ನಲ್ಲಿ ನಡೆಯಲಿರುವ ಭಾರತ-ಪಾಕ್ ಪಂದ್ಯದಲ್ಲಿ ಅವರು ಭಾಗಿಯಾಗುವ ಮೊದಲು ಫಿಟ್ ಎಂದು ವೈದ್ಯಕೀಯ  ವರದಿ ಸಿಕ್ಕರೆ ಮಾತ್ರ ಆಡಲಿದ್ದಾರೆ ಎಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ಮುಂದಿನ ಪಂದ್ಯ ಯಾವಾಗ?