ಧರ್ಮಶಾಲಾ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಇಂದಿನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ಹಾಗೂ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ ಪಂದ್ಯ ನಡೆಯಲಿದೆ.
ಇಂಗ್ಲೆಂಡ್ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿತ್ತು. ಗೆಲುವಿನ ಒತ್ತಡದಲ್ಲಿರುವಾಗ ಬಾಂಗ್ಲಾದೇಶ ಎದುರಾಗುತ್ತಿದೆ. ಇಂಗ್ಲೆಂಡ್ ಸುದೀರ್ಘ ಬ್ಯಾಟಿಂಗ್ ಕ್ರಮಾಂಕ ಹೊಂದಿದೆ. ಆದರೆ ಕಳೆದ ಪಂದ್ಯದಲ್ಲಿ ಬ್ಯಾಟಿಗರೇ ವಿಫಲವಾಗಿದ್ದು ಈ ಪಂದ್ಯದಲ್ಲಿ ಸುಧಾರಿಸುವ ವಿಶ್ವಾಸದಲ್ಲಿದೆ. ಅತ್ತ ಬಾಂಗ್ಲಾದೇಶ ಕೂಡಾ ತೀರಾ ದುರ್ಬಲ ತಂಡವೇನಲ್ಲ. ಸ್ವತಃ ಶಕೀಬ ಅಲ್ ಹಸನ್ ತಂಡಕ್ಕೆ ಶಕ್ತಿ. ಭಾರತದ ಪಿಚ್ ಗಳು ಬಾಂಗ್ಲಾಕ್ಕೆ ಹೆಚ್ಚು ಚಿರಪರಿಚಿತ. ಹೀಗಾಗಿ ಇಂಗ್ಲೆಂಡ್ ಗೆ ಸ್ಪರ್ಧೆಯೊಡ್ಡಬಹುದು. ಈ ಪಂದ್ಯ ಬೆಳಿಗ್ಗೆ 10.30 ಕ್ಕೆ ಆರಂಭವಾಗಲಿದೆ.
ಇನ್ನೊಂದು ಪಂದ್ಯದಲ್ಲಿ ಏಷ್ಯಾದ ಬಲಿಷ್ಠ ತಂಡಗಳ ಪೈಕಿ ಒಂದಾಗಿರುವ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ಪಂದ್ಯ ನಡೆಯಲಿದೆ. ಈ ಎರಡೂ ತಂಡಗಳಿಗೆ ಇದು ಎರಡನೆಯ ಪಂದ್ಯ. ಪಾಕಿಸ್ತಾನ ಮೊದಲ ಪಂದ್ಯವನ್ನು ನೆದರ್ಲ್ಯಾಂಡ್ಸ್ ವಿರುದ್ಧ ಗೆದ್ದುಕೊಂಡಿತ್ತು. ಆದರೆ ಶ್ರೀಲಂಕಾ, ದ.ಆಫ್ರಿಕಾ ವಿರುದ್ಧ ಸೋತಿತ್ತು. ಆ ಪಂದ್ಯದಲ್ಲಿ ಲಂಕಾ ಬೌಲರ್ ಗಳು ಎರ್ರಾಬಿರ್ರಿ ರನ್ ಬಿಟ್ಟುಕೊಟ್ಟಿದ್ದರು. ಈ ಪಂದ್ಯ ಅಪರಾಹ್ನ 2 ಗಂಟೆಗೆ ಹೈದರಾಬಾದ್ ನಲ್ಲಿ ನಡೆಯಲಿದೆ.