Publish Date: Tue, 10 Oct 2023 (08:50 IST)
Updated Date: Tue, 10 Oct 2023 (09:06 IST)
ಮುಂಬೈ: ಐಸಿಸಿ ಏಕದಿನ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಸ್ಟಾರ್ ಬ್ಯಾಟಿಗ ವಿರಾಟ್ ಕೊಹ್ಲಿ ಎಷ್ಟು ರನ್ ಗಳಿಸಿದ್ದಾರೆ, ಏನು ದಾಖಲೆ ಮಾಡಿದ್ದಾರೆ ನೋಡೋಣ.
ಇದುವರೆಗೆ 15 ವರ್ಷದ ವೃತ್ತಿ ಜೀವನದಲ್ಲಿ ಕೊಹ್ಲಿ ವಿಶ್ವಕಪ್ ನಲ್ಲಿ ಒಟ್ಟು 26 ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 1030 ರನ್ ಗಳನ್ನು ಕೊಹ್ಲಿ ಕಲೆ ಹಾಕಿದ್ದಾರೆ. ಒಟ್ಟು 4 ಬಾರಿ ಅಜೇಯರಾಗುಳಿದಿದ್ದರು.
ವಿಶ್ವಕಪ್ ಗಳಲ್ಲಿ ಕಿಂಗ್ ಕೊಹ್ಲಿ ಒಟ್ಟು 2 ಶತಕ ಸಿಡಿಸಿದ್ದು 107 ಅವರ ಗರಿಷ್ಠ ರನ್ ದಾಖಲೆಯಾಗಿದೆ. ಒಟ್ಟು 7 ಅರ್ಧಶತಕ ಸಿಡಿಸಿದ್ದಾರೆ. ಮೊದಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಕೊಹ್ಲಿ ಸಚಿನ್ ತೆಂಡುಲ್ಕರ್ ಅವರ ವಿಶ್ವಕಪ್ ನಲ್ಲಿ ಗರಿಷ್ಠ ರನ್ ಗಳಿಕೆ ದಾಖಲೆಯನ್ನು ಹಿಂದಿಕ್ಕಿದ್ದರು. ಇದೀಗ ಅವರು 2785 ರನ್ ಗಳಿಸಿದ್ದಾರೆ. ಈ ವಿಶ್ವಕಪ್ ನಲ್ಲಿ ಮತ್ತಷ್ಟು ದಾಖಲೆಗಳಾಗುವುದು ಗ್ಯಾರಂಟಿ.