Select Your Language

Notifications

webdunia
webdunia
webdunia
webdunia

ಶುಬ್ಮನ್ ಗಿಲ್ ಸ್ಥಾನಕ್ಕೆ ಟೀಂ ಇಂಡಿಯಾಗೆ ಜೈಸ್ವಾಲ್, ಋತುರಾಜ್ ಗಾಯಕ್ ವಾಡ್ ಗೆ ಕರೆ?

ಶುಬ್ಮನ್ ಗಿಲ್ ಸ್ಥಾನಕ್ಕೆ ಟೀಂ ಇಂಡಿಯಾಗೆ ಜೈಸ್ವಾಲ್, ಋತುರಾಜ್ ಗಾಯಕ್ ವಾಡ್ ಗೆ ಕರೆ?
ಮುಂಬೈ , ಮಂಗಳವಾರ, 10 ಅಕ್ಟೋಬರ್ 2023 (17:06 IST)
ಮುಂಬೈ: ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಟೀಂ ಇಂಡಿಯಾ ಆರಂಭಿಕ ಬ್ಯಾಟಿಗ ಶುಬ್ಮನ್ ಗಿಲ್ ಇನ್ನೂ ಚೇತರಿಸಿಕೊಂಡಿಲ್ಲ. ಮುಂದಿನ ಎರಡು ಪಂದ್ಯಗಳಿಗೆ ಅವರು ಲಭ್ಯರಾಗುವುದು ಅನುಮಾನ.

ಇಂತಹ ಪರಿಸ್ಥಿತಿಯಲ್ಲಿ ಬಿಸಿಸಿಐ ಗಿಲ್ ಸ್ಥಾನಕ್ಕೆ ಬ್ಯಾಕಪ್ ಆಗಿ ಮತ್ತೊಬ್ಬ ಆರಂಭಿಕ ಆಟಗಾರನನ್ನು ಆಯ್ಕೆ ಮಾಡಲು ಚಿಂತನೆ ನಡೆಸಿದೆ. ಮೂಲಗಳ ಪ್ರಕಾರ ಗಿಲ್ ಸ್ಥಾನಕ್ಕೆ ಇತ್ತೀಚೆಗೆ ಏಷ್ಯನ್ ಗೇಮ್ಸ್ ತಂಡದ ಭಾಗವಾಗಿದ್ದ ಋತುರಾಜ್ ಗಾಯಕ್ ವಾಡ್ ಅಥವಾ ಯಶಸ್ವಿ ಜೈಸ್ವಾಲ್ ಗೆ ಕರೆ ನೀಡುವ ಸಾಧ‍್ಯತೆಯಿದೆ.

ಗಿಲ್ ನಾಳೆಯ ಪಂದ್ಯಕ್ಕೆ ಗೈರಾಗಲಿದ್ದಾರೆ. ಮುಂದಿನ ಪಾಕ್ ವಿರುದ್ಧದ ಪಂದ್ಯಕ್ಕೂ ಅವರು ಕಮ್ ಬ್ಯಾಕ್ ಮಾಡುವುದು ಅನುಮಾನವಾಗಿದೆ. ಸದ್ಯಕ್ಕೆ ಅವರು ಚೆನ್ನೈನಲ್ಲಿಯೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಮತ್ತೊಬ್ಬ ಬ್ಯಾಕಪ್ ಆಟಗಾರನನ್ನು ತಂಡಕ್ಕೆ ಕರೆಸಿಕೊಳ್ಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಶುಬ್ಮನ್ ಗಿಲ್ ಆಸ್ಪತ್ರೆಗೆ ದಾಖಲು