Select Your Language

Notifications

webdunia
webdunia
webdunia
webdunia

ಏಕದಿನ ವಿಶ್ವಕಪ್ ಕ್ರಿಕೆಟ್: ಚಿನ್ನಸ್ವಾಮಿಯಲ್ಲಿ ಇಂದು ಭಾರತ-ನೆದರ್ಲ್ಯಾಂಡ್ಸ್ ಪಂದ್ಯ

ಏಕದಿನ ವಿಶ್ವಕಪ್ ಕ್ರಿಕೆಟ್: ಚಿನ್ನಸ್ವಾಮಿಯಲ್ಲಿ ಇಂದು ಭಾರತ-ನೆದರ್ಲ್ಯಾಂಡ್ಸ್ ಪಂದ್ಯ
ಬೆಂಗಳೂರು , ಭಾನುವಾರ, 12 ನವೆಂಬರ್ 2023 (08:30 IST)
ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ಇಂದು ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವೆ ಕೊನೆಯ ಲೀಗ್ ಪಂದ್ಯ ನಡೆಯಲಿದೆ.

ಬೆಂಗಳೂರಿನಲ್ಲಿ ಭಾರತ ತಂಡ ಆಡುವುದನ್ನು ನೋಡಲು ಇಲ್ಲಿನ ಅಭಿಮಾನಿಗಳು ಇಷ್ಟು ದಿನದಿಂದ ಕಾಯುತ್ತಿದ್ದಾರೆ. ಇಂದು ಆ ಪಂದ್ಯ ನಡೆಯುತ್ತಿದೆ. ಈ ಪಂದ್ಯದ ಫಲಿತಾಂಶ ಭಾರತ ಅಥವಾ ನೆದರ್ಲ್ಯಾಂಡ್ಸ್ ಗೆ ಯಾವುದೇ ಪರಿಣಾಮ ಬೀರದು. ಹಾಗಿದ್ದರೂ ಬೆಂಗಳೂರಿನ ಅಭಿಮಾನಿಗಳಿಗೆ ವಿಶೇಷ ಪಂದ್ಯ.

ಟೀಂ ಇಂಡಿಯಾ ಈ ಪಂದ್ಯಕ್ಕೆ ಕೆಲವು ಬದಲಾವಣೆ ಮಾಡಿಕೊಳ್ಳುವ ಸಾಧ‍್ಯತೆಯಿದೆ. ಸೆಮಿಫೈನಲ್ ಗೆ ಮುನ್ನ ನೆದರ್ಲ್ಯಾಂಡ್ಸ್ ವಿರುದ್ಧ ತನ್ನ ಸಾಮರ್ಥ್ಯ ಒರೆ ಹಚ್ಚಲು ಟೀಂ ಇಂಡಿಯಾಕ್ಕೆ ಇದು ಉತ್ತಮ ಅವಕಾಶ. ಹೀಗಾಗಿ ಇಂದು ಮತ್ತೊಮ್ಮೆ ಭಾರತ ಮತ್ತೊಮ್ಮೆ ಚಿನ್ನಸ್ವಾಮಿಯಲ್ಲಿ ವಿಜೃಂಭಿಸುವುದನ್ನು ನೋಡಬಹುದು. ಈ ಪಂದ್ಯ ಅಪರಾಹ್ನ 2 ಗಂಟೆಗೆ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಕದಿನ ವಿಶ್ವಕಪ್: ಟೀಂ ಇಂಡಿಯಾದಲ್ಲಿ ನಾಳೆ ಬದಲಾವಣೆ ಇರಲ್ಲ? ಸುಳಿವು ನೀಡಿದ ದ್ರಾವಿಡ್