Select Your Language

Notifications

webdunia
webdunia
webdunia
webdunia

ಮುಂದಿನ ಐಪಿಎಲ್ ನಲ್ಲಿ ರಿಷಬ್ ಪಂತ್ ಆಡ್ತಾರೆ: ಗಂಗೂಲಿ

ಮುಂದಿನ ಐಪಿಎಲ್ ನಲ್ಲಿ ರಿಷಬ್ ಪಂತ್ ಆಡ್ತಾರೆ: ಗಂಗೂಲಿ
ಕೋಲ್ಕೊತ್ತಾ , ಶನಿವಾರ, 11 ನವೆಂಬರ್ 2023 (10:50 IST)
ಕೋಲ್ಕೊತ್ತಾ: ರಸ್ತೆ ಅಪಘಾತದಲ್ಲಿ ಗಾಯಗೊಂಡು ಈಗಷ್ಟೇ ಚೇತರಿಸಿಕೊಂಡಿರುವ ಕ್ರಿಕೆಟಿಗ ರಿಷಬ್ ಪಂತ್ ಬಗ್ಗೆ ಸೌರವ್ ಗಂಗೂಲಿ ಸಿಹಿ ಸುದ್ದಿಯೊಂದನ್ನು ಕೊಟ್ಟಿದ್ದಾರೆ.

ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಪರ ಐಪಿಎಲ್ ಆಡುತ್ತಾರೆ. ಟೀಂ ಇಂಡಿಯಾಗೆ ಕಾಲಿಡುವ ಮೊದಲು ರಿಷಬ್ ಐಪಿಎಲ್ ಪರ ಆಡಲಿದ್ದಾರೆ. ಈ ವಿಚಾರವನ್ನು ಡೆಲ್ಲಿ ಮೆಂಟರ್ ಸೌರವ್ ಗಂಗೂಲಿ ಹೇಳಿದ್ದಾರೆ.

ಇತ್ತೀಚೆಗೆ ರಿಷಬ್ ದೆಹಲಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಂಪ್ ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಸದ್ಯಕ್ಕೆ ಅವರು ಅಭ್ಯಾಸ ನಡೆಸಲ್ಲ. ಆದರೆ ಮುಂದಿನ ಐಪಿಎಲ್ ವೇಳೆಗೆ ಫಿಟ್ ಆಗಿ ತಂಡಕ್ಕೆ ಬರಲಿದ್ದಾರೆ ಎಂದು ಗಂಗೂಲಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಕದಿನ ವಿಶ್ವಕಪ್: ಬಾಂಗ್ಲಾ ವಿರುದ್ಧ ಟಾಸ್ ಗೆದ್ದ ಆಸ್ಟ್ರೇಲಿಯಾ