Webdunia - Bharat's app for daily news and videos

Install App

CSK vs KKR: ಧೋನಿ ಬಂದರೂ ಬದಲಾಗದ ಲಕ್, ಸೋಲಿನ ಇತಿಹಾಸ ಬರೆದ ಸಿಎಸ್ ಕೆ

Krishnaveni K
ಶನಿವಾರ, 12 ಏಪ್ರಿಲ್ 2025 (08:08 IST)
Photo Credit: X
ಚೆನ್ನೈ: ಐಪಿಎಲ್ ನ ಪ್ರಬಲ ತಂಡವೆಂದು ಮೆರೆಯುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ  ಮಕಾಡೆ ಮಲಗಿದೆ. ನಾಯಕರಾಗಿ ಧೋನಿ ತಂಡಕ್ಕೆ ಬಂದರೂ ಲಕ್ ಬದಲಾಗಲಿಲ್ಲ. ಕೆಕೆಆರ್ ವಿರುದ್ಧದ ಪಂದ್ಯವನ್ನೂ 8 ವಿಕೆಟ್ ಗಳಿಂದ ಸೋಲುವ ಮೂಲಕ ಸಿಎಸ್ ಕೆ ಬೇಡದ ದಾಖಲೆ ಬರೆಯಿತು.

ಋತುರಾಜ್ ಗಾಯಕ್ ವಾಡ್ ಗಾಯಗೊಂಡ ಟೂರ್ನಿಯಿಂದ ಹೊರಬಿದ್ದಿರುವುದರಿಂದ ಧೋನಿ ತಂಡದ ನಾಯಕತ್ವ ವಹಿಸಿದ್ದರು. ಅವರು ನಾಯಕರಾದಾಗ ತಂಡ ಗೆದ್ದೇ ಬಿಟ್ಟಿತು ಎನ್ನುವ ಮಟ್ಟಿಗೆ ಸಿಎಸ್ ಕೆ ಅಭಿಮಾನಿಗಳು ಸಂಭ್ರಮಿಸಿದ್ದರು. ಆದರೆ ಧೋನಿ ನಾಯಕರಾಗಿದ್ದರಿಂದ ಪವಾಡವೇನೂ ನಡೆಯಲಿಲ್ಲ. ಬದಲಿಗೆ ಮತ್ತಷ್ಟು ಕಳಪೆ ಪ್ರದರ್ಶನ ನೀಡಿತು.

ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ ಕೆ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 103 ರನ್ ಗಳಿಸಿತು. ಚೆನ್ನೈ ಪರ ಶಿವಂ ದುಬೆ ಅಜೇಯ 31 ಮತ್ತು ವಿಜಯ್ ಶಂಕರ್ 29 ರನ್ ಗಳಿಸಿದ್ದು ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವಂತಹ ರನ್ ಬರಲಿಲ್ಲ. ಧೋನಿ ಕೊಡುಗೆ ಕೇವಲ 1 ರನ್.

ಈ ಮೊತ್ತವನ್ನು ಸುಲಭವಾಗಿ ಬೆನ್ನತ್ತಿದ ಕೆಕೆಆರ್ ಕೇವಲ 10.1 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 107 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು. ಇದರೊಂದಿಗೆ ಸಿಎಸ್ ಕೆ ಒಂದೇ ಐಪಿಎಲ್ ನಲ್ಲಿ ಸತತ ಐದು ಪಂದ್ಯ ಮತ್ತು ಚಿಪಾಕ್ ಮೈದಾನದಲ್ಲಿ ಸತತ ಮೂರು ಸೋಲುಗಳನ್ನು ಕಾಣುವ ಮೂಲಕ ಬೇಡದ ದಾಖಲೆ ಮಾಡಿತು. ಇದೇ ಮೊದಲ ಬಾರಿಗೆ ಸಿಎಸ್ ಕೆ ಸತತವಾಗಿ ಇಷ್ಟು ಪಂದ್ಯ ಸೋಲುತ್ತಿದೆ. ಇಷ್ಟು ದಿನ ಪ್ರಬಲ ತಂಡವಾಗಿದ್ದ ಸಿಎಸ್ ಕೆ ಈಗ ದುರ್ಬಲ ತಂಡವಾಗಿ ಗೋಚರಿಸುತ್ತಿರುವುದು ವಿಪರ್ಯಾಸ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Bengaluru stampede: ಮೊನ್ನೆಯಷ್ಟೇ ಕೊಹ್ಲಿ ಜೊತೆ ಸುತ್ತಾಟ, ಇಂದು ಪೊಲೀಸರ ಜೊತೆ ಅಲೆದಾಟ

Bengaluru Stampede: ಮೃತರ ಕುಟುಂಬಗಳಿಗೆ ಆರ್‌ಸಿಬಿ ತಲಾ ₹1ಕೋಟಿ ಪರಿಹಾರ ನೀಡಲು ಹೆಬ್ಬಾಳಕರ ಒತ್ತಾಯ

RCB: ಆರ್ ಸಿಬಿ ಮಾಲಿಕರು ನಿಜಕ್ಕೂ ಯಾರು, ತಂಡಕ್ಕೆ ಈ ಹೆಸರು ಬಂದಿದ್ದು ಹೇಗೆ ಇಲ್ಲಿದೆ ವಿವರ

Nikhil Sosale: ಅನುಷ್ಕಾ ಶರ್ಮಾಗೆ ಅಂಟಿಕೊಂಡೇ ಇದ್ದರು ಅರೆಸ್ಟ್ ಆಗಿರುವ ನಿಖಿಲ್ ಸೋಸಲೆ ಪತ್ನಿ

Gautam Gambhir: ಪೆಟ್ರೋಲ್ ಬಂಕ್ ಫೀಲ್ ಬರ್ತಾ ಇದ್ಯಲ್ಲೋ.. ಟ್ರೋಲ್ ಆಯ್ತು ಟೀಂ ಇಂಡಿಯಾ ಹೊಸ ಜೆರ್ಸಿ

ಮುಂದಿನ ಸುದ್ದಿ
Show comments