ಕರಾಚಿ: ನಾನು ಹಿಂದೂ ಎಂಬ ಕಾರಣಕ್ಕೆ ನನ್ನ ಕ್ರಿಕೆಟ್ ಬದುಕನ್ನೇ ಹಾಳು ಮಾಡಿದರು ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ದನೇಶ್ ಕನೇರಿಯಾ ಆರೋಪಿಸಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡ ಮಾಜಿ ಸ್ಪಿನ್ನರ್ ಆಗಿರುವ ದನೇಶ್ ಕನೇರಿಯಾ ಸಂದರ್ಶನವೊಂದರಲ್ಲಿ ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದಾರೆ. ಪಾಕಿಸ್ತಾನದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ತಡೆಯಲು ಅಮೆರಿಕಾ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಮೆರಿಕಾದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಅವರು ಪಾಕಿಸ್ತಾನದ ಅಲ್ಪಸಂಖ್ಯಾತರ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ನಾನೂ ಪಾಕಿಸ್ತಾನದಲ್ಲಿ ದೌರ್ಜನ್ಯಕ್ಕೊಳಗಾದೆ. ನಾನು ಹಿಂದೂ ಎಂಬ ಕಾರಣಕ್ಕೆ ನನ್ನ ವೃತ್ತಿಬದುಕನ್ನೇ ಕೊನೆಗೊಳಿಸಿದರು ಎಂದಿದ್ದಾರೆ.
ಪಾಕಿಸ್ತಾನ ಕ್ರಿಕೆಟಿಗನಾಗಿ ಇತರೆ ಕ್ರಿಕೆಟಿಗರಿಗೆ ಸಿಗುತ್ತಿದ್ದ ಸ್ಥಾನಮಾನ, ಗೌರವ ನನಗೆ ಸಿಗಲಿಲ್ಲ. ಇದೇ ಕಾರಣಕ್ಕೆ ನಾನಿಂದು ಅಮೆರಿಕಾದಲ್ಲಿದ್ದೇನೆ ಎಂದಿದ್ದಾರೆ. ಕನೇರಿಯಾ ಪಾಕಿಸ್ತಾನ ಪರ 61ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಪಾಕ್ ತಂಡವನ್ನು ಪ್ರತಿನಿಧಿಸಿದ ಕೇವಲ ಎರಡನೇ ಹಿಂದೂ ಆಟಗಾರನಾಗಿದ್ದರು.