ಮುಂಬೈ: ಟೀಂ ಇಂಡಿಯಾಕ್ಕೆ ಮುಂದಿನ ಪಂದ್ಯಕ್ಕೆ ಮಂಡಿ ನೋವಿಗೊಳಗಾಗಿದ್ದ ರಿಷಭ್ ಪಂತ್ ಅಲಭ್ಯರಿರುತ್ತಾರಾ ಎಂಬ ಅನುಮಾನಗಳಿಗೆ ಕೋಚ್ ಗೌತಮ್ ಗಂಭೀರ್ ಉತ್ತರ ನೀಡಿದ್ದಾರೆ.
ರಿಷಭ್ ಪಂತ್ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವಾಗ ಚೆಂಡು ಬಡಿದು ಮಂಡಿ ನೋವಿಗೊಳಗಾಗಿದ್ದರು. ಹೀಗಾಗಿ ಕೆಲವು ಸಮಯ ಅವರು ಮೈದಾನಕ್ಕೂ ಇಳಿದಿರಲಿಲ್ಲ. ಆದರೆ ದ್ವಿತೀಯ ಇನಿಂಗ್ಸ್ ನಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ್ದರು. ಆದರೆ ಗಾಯ ಮಾಗದೇ ಅವರು ಎರಡನೇ ಟೆಸ್ಟ್ ನಲ್ಲಿ ಆಡುವುದಿಲ್ಲ ಎನ್ನಲಾಗುತ್ತಿತ್ತು.
ಆದರೆ ಈಗ ಸ್ವತಃ ಕೋಚ್ ಗೌತಮ್ ಗಂಭೀರ್ ಸ್ಪಷ್ಟನೆ ನೀಡಿದ್ದಾರೆ. ಎರಡನೇ ಟೆಸ್ಟ್ ನಲ್ಲಿ ರಿಷಭ್ ಪಂತ್ ಆಡಲಿದ್ದಾರೆ ಎಂದು ಗೌತಮ್ ಗಂಭೀರ್ ಸ್ಪಷ್ಟನೆ ನೀಡಿದ್ದಾರೆ. ಭಾರತಕ್ಕೆ ಸರಣಿ ಉಳಿಸಿಕೊಳ್ಳುವ ನಿಟ್ಟಿನಿಂದ ಮತ್ತು ಡಬ್ಲ್ಯುಟಿಸಿ ಶ್ರೇಯಾಂಕ ದೃಷ್ಟಿಯಿಂದ ಈ ಪಂದ್ಯ ಮಹತ್ವದ್ದಾಗಿದೆ.
ಹೀಗಾಗಿ ರಿಷಭ್ ಪಂತ್ ಲಭ್ಯತೆ ಮುಖ್ಯವಾಗಿದೆ. ಇದೀಗ ರಿಷಭ್ ಲಭ್ಯರಿರಲಿದ್ದಾರೆ ಎಂದು ಹೇಳಿರುವುದರಿಂದ ಅಭಿಮಾನಿಗಳಿಗೂ ರಿಲೀಫ್ ಸಿಕ್ಕಂತಾಗಿದೆ. ಇತ್ತ ಕಳಪೆ ಫಾರ್ಮ್ ನಲ್ಲಿರುವ ಕೆಎಲ್ ರಾಹುಲ್ ಗೂ ಇನ್ನೊಂದು ಅವಕಾಶ ನೀಡಲು ಗಂಭೀರ್ ಉತ್ಸುಕರಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.