Select Your Language

Notifications

webdunia
webdunia
webdunia
webdunia

ಇಂದು ಬಿಸಿಸಿಐ ಮಹತ್ವದ ಸಭೆ: ಐಪಿಎಲ್ ಬಗ್ಗೆ ತೀರ್ಮಾನ ಸಾಧ್ಯತೆ

ಇಂದು ಬಿಸಿಸಿಐ ಮಹತ್ವದ ಸಭೆ: ಐಪಿಎಲ್ ಬಗ್ಗೆ ತೀರ್ಮಾನ ಸಾಧ್ಯತೆ
ಮುಂಬೈ , ಶುಕ್ರವಾರ, 17 ಜುಲೈ 2020 (09:59 IST)
ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಹತ್ವದ ಸಭೆ ಇಂದು ನಡೆಯಲಿದ್ದು, ಈ ಸಭೆಯಲ್ಲಿ ಐಪಿಎಲ್ 13 ಆಯೋಜನೆ ಬಗ್ಗೆ ತೀರ್ಮಾನವಾಗುವ ಸಾಧ‍್ಯತೆಯಿದೆ.


ಅಕ್ಟೋಬರ್ ನಲ್ಲಿ ನಡೆಯಬೇಕಿದ್ದ ಐಸಿಸಿ ಟಿ20 ರದ್ದುಗೊಳಿಸುವ ಸಾಧ‍್ಯತೆಯಿದ್ದು, ಆ ಸಮಯದಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ. ಒಂದು ವೇಳೆ ಭಾರತದಲ್ಲಿ ಸಾಧ‍್ಯವಾಗದೇ ಹೋದರೆ ವಿದೇಶೀ ತಾಣದಲ್ಲಾದರೂ ಐಪಿಎಲ್ ನಡೆಸಲು ಬಿಸಿಸಿಐ ಯೋಜನೆ ನಡೆಸಿದೆ. ಈ ಬಗ್ಗೆ ಇಂದು ನಡೆಯಲಿರುವ ಸಭೆಯಲ್ಲಿ ತೀರ್ಮಾನವಾಗುವ ಸಾಧ‍್ಯತೆಯಿದೆ.

ಇದಲ್ಲದೆ, ಈ ಋತುವಿನ ದೇಶೀಯ ಕ್ರಿಕೆಟ್, ಭಾರತ-ಇಂಗ್ಲೆಂಡ್ ಕ್ರಿಕೆಟ್ ಸರಣಿಯ ಪರಿಷ್ಕೃತ ವೇಳಾಪಟ್ಟಿ ತಯಾರಿಸುವುದು ಇತ್ಯಾದಿ ಇಂದಿನ ಸಭೆಯ ಮಹತ್ವದ ವಿಚಾರಗಳಾಗಲಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ತಂಡದಿಂದ ಕೊಕ್ ಪಡೆದ ಇಂಗ್ಲೆಂಡ್ ವೇಗಿ