Publish Date: Thu, 16 Jul 2020 (09:13 IST)
Updated Date: Thu, 16 Jul 2020 (09:14 IST)
ಕೋಲ್ಕೊತ್ತಾ: ಸಹೋದರ ಸ್ನೇಹಶಿಷ್ ಗಂಗೂಲಿಗೆ ಕೊರೋನಾ ದೃಢಪಟ್ಟ ಹಿನ್ನಲೆಯಲ್ಲಿ ಬಿಸಿಸಿಐ ಅಧ‍್ಯಕ್ಷ ಸೌರವ್ ಗಂಗೂಲಿ ಸ್ವಯಂ ಕ್ವಾರಂಟೈನ್ ಗೊಳಗಾಗಲು ತೀರ್ಮಾನಿಸಿದ್ದಾರೆ.
ಇತ್ತೀಚೆಗಷ್ಟೇ ಸ್ನೇಹಶಿಷ್ ಪತ್ನಿ, ತಂದೆಗೆ ಕೊರೋನಾ ದೃಢಪಟ್ಟಿತ್ತು. ಆದರೆ ಇದೀಗ ಬೆಂಗಾಳ ಕ್ರಿಕೆಟ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿಯೂ ಆಗಿರುವ ಸಹೋದರ ಸ್ನೇಹಶಿಷ್ ಗೆ ಕೊರೋನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಗಂಗೂಲಿ ಹೋಂ ಕ್ವಾರಂಟೈನ್ ಗೊಳಗಾಗಲು ನಿರ್ಧರಿಸಿದ್ದಾರೆ. ಸಹೋದರನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.