Publish Date: Fri, 17 Jul 2020 (09:47 IST)
Updated Date: Fri, 17 Jul 2020 (13:28 IST)
ಲಂಡನ್: ವೆಸ್ಟ್ ಇಂಡೀಸ್ ವಿರುದ್ಧ ನಿನ್ನೆಯಿಂದ ಆರಂಭವಾದ ದ್ವಿತೀಯ ಟೆಸ್ಟ್ ಪಂದ್ಯದಿಂದ ಇಂಗ್ಲೆಂಡ್ ವೇಗಿ ಜೊಫ್ರಾ ಆರ್ಚರ್ ಅವರನ್ನು ಕೈ ಬಿಡಲಾಗಿದೆ. ಇದಕ್ಕೆ ಕಾರಣ ಅವರು ಕೊರೋನಾ ರೂಲ್ಸ್ ಬ್ರೇಕ್ ಮಾಡಿದ್ದು!
ಸೋಮವಾರ ಸೌಥಾಂಪ್ಟನ್ ನಿಂದ ಪಂದ್ಯ ನಡೆಯುವ ಮ್ಯಾಂಚೆಸ್ಟರ್ ಗೆ ಪ್ರಯಾಣ ಬೆಳೆಸುವಾಗ ಜೊಫ್ರಾ ಕೊರೋನಾದಿಂದ ರಕ್ಷಿಸಿಕೊಳ್ಳಲು ಮಾಡಲಾಗಿದ್ದ ನಿಯಮಾವಳಿಗಳನ್ನು ಮುರಿದರು ಎಂಬ ಕಾರಣಕ್ಕೆ ಅವರನ್ನು ಆಡುವ ಬಳಗದಿಂದ ಹೊರಗಿಡಲಾಗಿದೆ.
ಇಂಗ್ಲೆಂಡ್ ಮಂಡಳಿ ಅಧಿಕೃತ ಕಾರಣ ತಿಳಿಸದೇ ಇದ್ದರೂ ಪ್ರಯಾಣದ ನಡುವೆ ಜೊಫ್ರಾ ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಮನೆಗೆ ಭೇಟಿ ನೀಡಿದ್ದೇ ಇದಕ್ಕೆ ಕಾರಣವೆಂದು ಹೇಳಲಾಗಿದೆ.