Select Your Language

Notifications

webdunia
webdunia
webdunia
webdunia

ಗ್ಯಾರಿ ಕಸ್ಟರ್ನ್ ಗಾಗಿ ಪ್ರವಾಸವನ್ನೇ ರದ್ದು ಮಾಡಿದ್ದರಂತೆ ಧೋನಿ!

ಧೋನಿ
ಮುಂಬೈ , ಗುರುವಾರ, 16 ಜುಲೈ 2020 (11:30 IST)
ಮುಂಬೈ: ನಾಯಕರಾಗಿದ್ದ ಧೋನಿ ಮತ್ತು ಕೋಚ್ ಗ್ಯಾರಿ ಕಸ್ಟರ್ನ್ ನಡುವೆ ಎಂಥಾ ಸಾಮರಸ್ಯವಿತ್ತು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಧೋನಿ ಎಂತಹ ಉದಾತ್ತ ನಾಯಕ ಎಂಬುದನ್ನು ಗ್ಯಾರಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.


ವಿಶ್ವಕಪ್ ಸಂದರ್ಭದಲ್ಲಿ ವಿಮಾನಯಾನ ತರಬೇತಿ ನೀಡುತ್ತಿದ್ದ ಬೆಂಗಳೂರಿನ ಕೇಂದ್ರವೊಂದಕ್ಕೆ ಭೇಟಿ ನೀಡಲು ಟೀಂ ಇಂಡಿಯಾಗೆ ಆಹ್ವಾನ ನೀಡಲಾಗಿತ್ತಂತೆ. ಆದರೆ ಆಗ ತಂಡದಲ್ಲಿದ್ದ ವಿದೇಶೀ ಮೂಲದ ಕೋಚ್ ಗ್ಯಾರಿ ಕಸ್ಟರ್ನ್, ಪ್ಯಾಡಿ ಆಪ್ಟನ್ ಮತ್ತು ಎರಿಕ್ ಸಿಮನ್ಸ್ ಗೆ ಪ್ರವೇಶ ನಿರಾಕರಿಸಲಾಗಿತ್ತಂತೆ.

ಹೀಗಾಗಿ ಧೋನಿ ತಮ್ಮ ಇಡೀ ತಂಡದ ಜತೆಗೆ ಆ ವಿಶೇಷ ಭೇಟಿಯನ್ನೇ ರದ್ದುಗೊಳಿಸಿದರು. ಅಂತಹ ನಾಯಕ ಧೋನಿ ಎಂದು ಕಸ್ಟರ್ನ್ ಹೊಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಅಭಿಮಾನಿಗಳಿಗೆ ಕಾದಿದೆ ಸದ್ಯದಲ್ಲೇ ಸಿಹಿ ಸುದ್ದಿ