Publish Date: Sun, 12 Jul 2020 (09:51 IST)
Updated Date: Sun, 12 Jul 2020 (09:52 IST)
ಲಕ್ನೋ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್ ಗೂ ಕೊರೋನಾ ಇರುವುದು ದೃಢಪಟ್ಟಿದೆ. ಅವರೀಗ ಲಕ್ನೋದ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶುಕ್ರವಾರ ಅವರಿಗೆ ಕೊರೋನಾ ಇರುವುದು ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಇದೀಗ ಅವರ ಕುಟುಂಬಸ್ಥರೂ ಕ್ವಾರಂಟೈನ್ ನಲ್ಲಿದ್ದು, ಪರೀಕ್ಷೆಗೊಳಗಾಗುತ್ತಿದ್ದಾರೆ. ಚೌಹಾಣ್ ಕೊರೋನಾಕ್ಕೊಳಗಾದ ಮೊದಲ ಭಾರತೀಯ ಕ್ರಿಕೆಟಿಗರಾಗಿದ್ದಾರೆ. ಅವರು ಶೀಘ್ರ ಗುಣಮುಖರಾಗುವಂತೆ ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಹಾರೈಸಿದ್ದಾರೆ.