Publish Date: Mon, 13 Jul 2020 (09:26 IST)
Updated Date: Mon, 13 Jul 2020 (09:29 IST)
ಮುಂಬೈ: ಕೊರೋನಾ ಮಹಾಮಾರಿ ದಿನೇ ದಿನೇ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕ್ರಿಕೆಟ್ ಚಟುವಟಿಕೆಗಳು ಸಂಪೂರ್ಣ ಬಂದ್ ಆಗಿವೆ. ಇದೀಗ ಕ್ರಿಕೆಟಿಗರಿಗೆ ಹೊರಗಡೆ ಅಭ್ಯಾಸ ನಡೆಸಲೂ ಭಯ ಅವರಿಸಿದೆಯಂತೆ.
ಟೀಂ ಇಂಡಿಯಾ ಕ್ರಿಕೆಟಿಗರಲ್ಲಿ ಒಂದು ರೀತಿಯ ಭಯವಿದೆ. ಪಂದ್ಯ ಬಿಡಿ, ಅಭ್ಯಾಸಕ್ಕಾದಾರೂ ಹೊರಗಿಳಿದರೆ ಸೋಂಕು ತಗುಲಿದರೆ ಎಂಬ ಭಯ ಅವರನ್ನು ಕಾಡುತ್ತಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮುಂತಾದ ಘಟಾನುಘಟಿ ಆಟಗಾರರು ವಾಸಿಸುವ ಮುಂಬೈ ಕೊರೋನಾದ ಹಾಟ್ ಸ್ಪಾಟ್ ಆಗಿದೆ. ಹೀಗಿರುವಾಗ ಅವರಿಗೆ ಹೊರಗೆ ಬರಲೂ ಭಯವಿದೆ. ಹೀಗಾಗಿ ಸದ್ಯಕ್ಕಂತೂ ಕ್ರಿಕೆಟ್ ಚಟುವಟಿಕೆ ನಡೆಯಲ್ಲ ಎಂದು ಗಂಗೂಲಿ ಸುಳಿವು ನೀಡಿದ್ದಾರೆ.