Select Your Language

Notifications

webdunia
webdunia
webdunia
webdunia

ಧೋನಿ ಒಮ್ಮೆ ಡಿಸೈಡ್ ಮಾಡಿದರೆ ದೇವರೂ ಬದಲಾಯಿಸಕ್ಕಾಗಲ್ಲ!

ಧೋನಿ ಒಮ್ಮೆ ಡಿಸೈಡ್ ಮಾಡಿದರೆ ದೇವರೂ ಬದಲಾಯಿಸಕ್ಕಾಗಲ್ಲ!
ರಾಂಚಿ , ಶನಿವಾರ, 11 ಜುಲೈ 2020 (10:25 IST)
ರಾಂಚಿ: ಧೋನಿ ನಾಯಕನಾಗಿಯೂ ಒಬ್ಬ ವ್ಯಕ್ತಿಯಾಗಿಯೂ ತಮ್ಮ ನಿರ್ಧಾರಕ್ಕೆ ಎಷ್ಟು ಅಂಟಿಕೊಳ್ಳುತ್ತಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ನಲ್ಲಿ ಅವರ ನಾಯಕತ್ವದಲ್ಲಿ ಆಡಿದ್ದ ಬದರೀನಾಥ್ ಬಹಿರಂಗಪಡಿಸಿದ್ದಾರೆ.


ಧೋನಿ ಯಾವುದೇ ವಿಚಾರವನ್ನೂ ಒಮ್ಮೆ ನಿರ್ಧರಿಸಿದರೆ ಮುಗೀತು. ದೇವರು ಬಂದರೂ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ತಂಡದ ವಿಚಾರದಲ್ಲೂ ಅಷ್ಟೇ ಎಂದು ಬದರಿನಾಥ್ ಹೇಳಿದ್ದಾರೆ.

‘ತಂಡದಲ್ಲಿ ಪ್ರತಿಯೊಬ್ಬರಿಗೂ ಧೋನಿ ಒಂದೊಂದು ಪಾತ್ರ ನೀಡಿದ್ದರು. ಅದರಂತೆ ನನಗೆ ಸಂಕಟದಿಂದ ಮೇಲೆತ್ತುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಜವಾಬ್ಧಾರಿಯಿತ್ತು. ಅವರು ಒಮ್ಮೆ ಬದರಿ ಇದನ್ನು ಮಾಡುತ್ತಾರೆ ಎಂದರೆ ಮುಗೀತು. ಯಾರಿಗೇ ಆದರೂ ಒಂದು ಅವಕಾಶ ನೀಡಿದರೆ ಅವರಿಗೆ ಸಾಬೀತುಪಡಿಸಲು ಸಾಕಷ್ಟು ಅವಕಾಶ ನೀಡುತ್ತಿದ್ದರು. ಹಾಗೆಯೇ ಒಂದು ವೇಳೆ ನೀವು ಸರಿಯಾದ ವ್ಯಕ್ತಿಯಲ್ಲ ಎಂದೇನಾದರೂ ಅನಿಸಿದರೆ, ದೇವರೇ ಬಂದು ಹೇಳಿದರೂ ಅವರಿಗೆ ನಿಮ್ಮ ಮೇಲೆ ಒಳ್ಳೆ ಅಭಿಪ್ರಾಯ ಬರಲ್ಲ’ ಎಂದು ಬದರೀನಾಥ್ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಜೆರ್ಸಿಯಲ್ಲಿ ಭಾರತೀಯ ವೈದ್ಯನ ಹೆಸರು