ಹ್ಯಾಪೀ ಬರ್ತ್ ಡೇ ಮಾಹಿ: ಧೋನಿ ಹುಟ್ಟುಹಬ್ಬಕ್ಕೆ ಟೀಂ ಇಂಡಿಯಾ ಹುಡುಗರ ಸ್ಪೆಷಲ್ ವಿಶ್

ಮಂಗಳವಾರ, 7 ಜುಲೈ 2020 (09:36 IST)
ರಾಂಚಿ: ಟೀಂ ಇಂಡಿಯಾ ಕ್ರಿಕೆಟ್ ನ ಕೂಲ್ ಕ್ಯಾಪ್ಟನ್ ಎಂದೇ ಗುರುತಿಸಿಕೊಳ್ಳುವ ಭಾರತಕ್ಕೆ ಎರಡೆರಡು ವಿಶ್ವಕಪ್ ಗೆಲ್ಲಿಸಿಕೊಟ್ಟ ಮಹೇಂದ್ರ ಸಿಂಗ್ ಧೋನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಧೋನಿ ಹುಟ್ಟುಹಬ್ಬಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದಾರೆ.


ಟೀಂ ಇಂಡಿಯಾ  ನಾಯಕ ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದು ‘ನಾನು ಯಾವತ್ತೂ ಹೇಳುವ ಹಾಗೆ ನೀವು ಎಂದೆಂದಿಗೂ ನನಗೆ ಕ್ಯಾಪ್ಟನ್. ಯಾವುದೇ ಯುವ ಆಟಗಾರನೂ ಬಯಸುವ ನಾಯಕ ನೀವು. ನಿಮ್ಮ ಜೀವನದಲ್ಲಿ ಸುಖ, ಸಂತೋಷ ನೆಲೆಸಿರಲಿ’ ಎಂದು ಹಾರೈಸಿದ್ದಾರೆ.

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕೂಡಾ ವಿಶ್‍ ಮಾಡಿದ್ದು ನೀನು ದಶಕಗಳಿಂದ ರಾಷ್ಟ್ರೀಯ ಹೀರೋ ಆಗಿರುವೆ. ನಿನ್ನ ದಾಖಲೆಗಳನ್ನು ಯಾರೂ ಮುರಿಯಲಾರರು ಎಂದು ಕೊಂಡಾಡಿದ್ದಾರೆ.

ಟೀಂ ಇಂಡಿಯಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಧೋನಿ ನಾಯಕತ್ವದಲ್ಲಿ ಆಡುವ ಕ್ರಿಕೆಟಿಗ ಕೇದಾರ್ ಜಾಧವ್ ಧೋನಿಗಾಗಿ ಮಾರುದ್ದದ ಪತ್ರ ಬರೆದು ವಿಶಿಷ್ಟವಾಗಿ ವಿಶ್ ಮಾಡಿದ್ದಾರೆ. ನೀವು ನನ್ನ ಕ್ಯಾಪ್ಟನ್ ಮಾತ್ರವಲ್ಲ, ಗೆಳೆಯ, ಹಿತೈಷಿ ಎಂದು ಕೊಂಡಾಡಿದ್ದಾರೆ.

ಉಳಿದಂತೆ ಟೀಂ ಇಂಡಿಯಾ ಆಟಗಾರರಾದ ಶ್ರೇಯಸ್ ಅಯ್ಯರ್, ಮಹಿಳಾ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಸೇರಿದಂತೆ ಕ್ರಿಕೆಟ್ ಜಗತ್ತಿನ ಅನೇಕರು, ಅಭಿಮಾನಿಗಳು ಧೋನಿಗೆ ಶುಭಾಷಯಗಳ ಮಹಾಪೂರವನ್ನೇ ಹರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಐಸಿಸಿ ಮುಖ್ಯಸ್ಥ ಸ್ಥಾನಕ್ಕೆ ಸೌರವ್ ಗಂಗೂಲಿ ಹೆಸರು ಮುಂಚೂಣಿಯಲ್ಲಿ