ಐಪಿಎಲ್ ಆಯೋಜಿಸಲು ಮುಂದಾದ ನ್ಯೂಜಿಲೆಂಡ್

ಮಂಗಳವಾರ, 7 ಜುಲೈ 2020 (09:10 IST)
ಮುಂಬೈ: ಭಾರತದಲ್ಲಂತೂ ಈ ವರ್ಷ ಐಪಿಎಲ್ ಆಯೋಜಿಸುವುದು ಸಾಧ‍್ಯವಿಲ್ಲದ ಮಾತು. ಹೀಗಾಗಿ ಬಿಸಿಸಿಐ ತನ್ನ ಶ್ರೀಮಂತ ಕ್ರೀಡಾಕೂಟವನ್ನು ವಿದೇಶದಲ್ಲಾದರೂ ಆಯೋಜಿಸಲು ತಯಾರಿ ನಡೆಸಿದೆ.


ಈಗಾಗಲೇ ಯುಎಇ ಮತ್ತು ಶ್ರೀಲಂಕಾ ಐಪಿಎಲ್ ಆಯೋಜಿಸಲು ತಾವು ಸಿದ್ಧ ಎಂದು ಬಿಸಿಸಿಐಗೆ ಆಹ್ವಾನವಿತ್ತಿದೆ. ಇದರ ನಡುವೆಯೇ ಈಗ ನ್ಯೂಜಿಲೆಂಡ್ ಕೂಡಾ ಐಪಿಎಲ್ ಆಯೋಜಿಸಲು ಸಿದ್ಧವಿರುವುದಾಗಿ ಹೇಳಿಕೊಂಡಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.

ಆದರೆ ಬಿಸಿಸಿಐ ಯಾವ ದೇಶದಲ್ಲಿ ಐಪಿಎಲ್ ಆಯೋಜಿಸಬೇಕು ಎಂಬ ಬಗ್ಗೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ. ಭಾರತದಲ್ಲಿ ಸಾಧ‍್ಯವಾಗದೇ ಹೋದರೆ ಕೊರೋನಾ ಪ್ರಕರಣಗಳು ಕಡಿಮೆಯಿರುವ ಸುರಕ್ಷಿತ ತಾಣದಲ್ಲಿ ಐಪಿಎಲ್ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೊರೋನಾದಿಂದ ಟಿ20 ವಿಶ್ವಕಪ್ ಆಯೋಜನೆ ಸಾಧ್ಯವಾಗಲ್ಲ ಎಂದಾದರೆ ಐಪಿಎಲ್ ಹೇಗಾಗುತ್ತದೆ?!