ನಟ ಅಜಿತ್ ಕುಮಾರ್, ಧೋನಿ ಅಭಿಮಾನಿಗಳ ನಡುವೆ ಕಿತ್ತಾಟ!

ಬುಧವಾರ, 8 ಜುಲೈ 2020 (09:18 IST)
ಚೆನ್ನೈ: ‘ತಲಾ’ ಎಂದು ಕರೆಯಿಸಿಕೊಳ್ಳುವುದು ತಮಿಳು ಸ್ಟಾರ್ ನಟ ಅಜಿತ್ ಕುಮಾರ್. ಅಭಿಮಾನಿಗಳು ಪ್ರೀತಿಯಿಂದ ಅವರನ್ನು ಕರೆಯುವುದೇ ಹಾಗೆ. ಆದರೆ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಯಾದ ಬಳಿಕ ಚೆನ್ನೈ ಅಭಿಮಾನಿಗಳು ಅವರನ್ನು ‘ತಲಾ’ ಎಂದು ಕರೆಯಲು ಪ್ರಾರಂಭಿಸಿದರು.


ಆದರೆ ಇದುವೇ ಈಗ ಇಬ್ಬರು ಸ್ಟಾರ್ ಗಳ ನಡುವಿನ ಅಭಿಮಾನಿಗಳ ಕಿತ್ತಾಟಕ್ಕೆ ಕಾರಣವಾಗಿದೆ. ನಿನ್ನೆ ಧೋನಿ ಬರ್ತ್ ಡೇ ಆಗಿದ್ದು, ಧೋನಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅವರನ್ನು ‘ತಲಾ’ ಧೋನಿ ಎಂದು ವಿಶ್ ಮಾಡಿದ್ದರು.

ಇದರಿಂದ ಸಿಟ್ಟಿಗೆದ್ದ ಅಜಿತ್ ಅಭಿಮಾನಿಗಳು ನಿಜವಾದ ತಲಾ ಯಾವತ್ತಿದ್ದರೂ ಅಜಿತ್ ಎಂದು ಟ್ವಿಟರ್ ಟ್ರೆಂಡ್ ಸೃಷ್ಟಿಸಿದ್ದಾರೆ. ಧೋನಿ ಏನಿದ್ದರೂ ಸೆಕೆಂಡ್ ತಲಾ ಅಷ್ಟೇ ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ಇಬ್ಬರೂ ಲೆಜೆಂಡ್ ಗಳು ಸಮಾಧಾನ ಪಟ್ಟುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಪ್ರಾಯೋಜಕರಿಗೂ ಗತಿಯಿಲ್ಲ!