ಫಾರ್ಮ್ ಹೌಸ್ ನಲ್ಲಿ ಅಪ್ಪಟ ಕೃಷಿಕನಾಗಿರುವ ಧೋನಿ!

ಭಾನುವಾರ, 28 ಜೂನ್ 2020 (09:26 IST)
ರಾಂಚಿ: ಕಳೆದ ಒಂದು ವರ್ಷಗಳಿಂದ ಕ್ರಿಕೆಟ್ ನಿಂದ ದೂರವಿರುವ ಕ್ರಿಕೆಟಿಗ ಧೋನಿ ಈಗ ಲಾಕ್ ಡೌನ್ ನಿಂದಾಗಿ ಸಂಪೂರ್ಣವಾಗಿ ಕ್ರಿಕೆಟ್ ಮರೆತು ಅಪ್ಪಟ ಕೃಷಿಕನಾಗಿದ್ದಾರೆ!


ರಾಂಚಿಯ ತಮ್ಮ ಫಾರ್ಮ್ ಹೌಸ್ ನಲ್ಲಿ ಕುಟುಂಬ ಸಮೇತ ಕಾಲ ಕಳೆಯುತ್ತಿರುವ ಧೋನಿ ಟ್ರ್ಯಾಕ್ಟರ್ ಹಿಡಿದು ಕೃಷಿ ಕೆಲಸ ಮಾಡುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಮೂಲಕ ಬಿಡುವಿನ ವೇಳೆಯಲ್ಲಿ ತಮಗಿಷ್ಟವಾದ ಎಲ್ಲಾ ಕೆಲಸಗಳನ್ನು ಮಾಡುತ್ತಾ ಧೋನಿ ಕೂಲ್ ಆಗಿ ಕಾಲ ಕಳೆಯುತ್ತಿದ್ದಾರೆ. ಐಪಿಎಲ್ ಆರಂಭವಾಗುವ ಸೂಚನೆ ಸಿಕ್ಕರೆ ಮತ್ತೆ ಅವರು ಕ್ರಿಕೆಟ್ ಅಂಗಣಕ್ಕಿಳಿಯಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪಾಕ್ ಕ್ರಿಕೆಟಿಗ ಹಫೀಜ್ ಕೊರೋನಾ ಪರೀಕ್ಷೆ ಬಗ್ಗೆ ಗೊಂದಲವೋ ಗೊಂದಲ