ಪಾಕಿಸ್ತಾನಕ್ಕೆ ವಿಶ್ವಕಪ್ ಆಡಲು ಭಾರತ ಅವಕಾಶ ಕೊಡದೇ ಇದ್ರೆ ಎಂಬ ಭಯ!

ಗುರುವಾರ, 25 ಜೂನ್ 2020 (10:01 IST)
ಮುಂಬೈ: 2021 ರ ಟಿ20 ವಿಶ್ವಕಪ್ ಮತ್ತು 2023 ರ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. ಆದರೆ ಈ ವಿಶ್ವಕಪ್ ನಲ್ಲಿ ಆಡಲು ಭಾರತಕ್ಕೆ ಬರಲು ಅವಕಾಶ ಸಿಗದೇ ಹೋದರೆ ಎಂಬ ಭಯ ಪಾಕಿಸ್ತಾನಕ್ಕೆ ಕಾಡುತ್ತಿದೆ.


ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ನಮ್ಮ ದೇಶಕ್ಕೆ ಆಗಮಿಸಲು ಪಾಕ್ ತಂಡಕ್ಕೆ ಸರ್ಕಾರದ ಒಪ್ಪಿಗೆ ಸಿಗದೇ ಹೋದರೆ ಪಾಕ್ ಗೆ ವಿಶ್ವಕಪ್ ನಲ್ಲಿ ಭಾಗವಹಿಸುವ ಅವಕಾಶ ಸಿಗದೇ ಹೋಗಲಿದೆ.

ಹೀಗಾಗಿ ಭಾರತ ಈ ವಿಚಾರದಲ್ಲಿ ತನಗೆ ಭರವಸೆ ನೀಡಬೇಕು ಎಂದು ಪಾಕ್ ಒತ್ತಾಯಿಸಿದೆ. ಭಾರತ ಈ ಬಗ್ಗೆ ಲಿಖಿತ ಭರವಸೆ ನೀಡಬೇಕು ಎಂದು ಪಿಸಿಬಿ ಆಗ್ರಹಿಸಿದೆ. ಈ ಬಗ್ಗೆ ಐಸಿಸಿ ಸಹಾಯಕ್ಕೆ ಬರಬಹುದು ಎಂದು ಪಿಸಿಬಿ ಆಶಾಭಾವನೆಯಲ್ಲಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮತ್ತೆ ಕ್ರಿಕೆಟ್ ಅಂಗಣಕ್ಕಿಳಿದ ರೋಹಿತ್ ಶರ್ಮಾ