Publish Date: Thu, 16 Jul 2020 (10:00 IST)
Updated Date: Thu, 16 Jul 2020 (10:03 IST)
ಮುಂಬೈ: ಕೊರೋನಾದಿಂದಾಗಿ ಈ ವರ್ಷ ಐಪಿಎಲ್ ಯಾವಾಗ ನಡೆಯುತ್ತದೋ ಎಂದು ಕಾದು ಕೂತಿದ್ದ ಅಭಿಮಾನಿಗಳಿಗೆ ಸದ್ಯದಲ್ಲೇ ಸಿಹಿ ಸುದ್ದಿ ಸಿಗುವ ನಿರೀಕ್ಷೆಯಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಮುಂದಿನ ಸಾಮಾನ್ಯ ಸಭೆಯಲ್ಲಿ ಅಕ್ಟೋಬರ್ ನಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್ ರದ್ದು ಮಾಡುವ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಯಿದೆ. ಇದೇ ಸಮಯವನ್ನು ಬಿಸಿಸಿಐ ಐಪಿಎಲ್ ಗೆ ಬಳಸಲು ಯೋಜನೆ ಹಾಕಿಕೊಂಡಿದೆ.
ವಿದೇಶದಲ್ಲಾದರೂ ಸರಿಯೇ ಐಪಿಎಲ್ ನಡೆಸಲು ಬಿಸಿಸಿಐ ತಯಾರಿ ನಡೆಸಿದ್ದು, ಐಸಿಸಿ ಟಿ20 ವಿಶ್ವಕಪ್ ರದ್ದು ಎಂದು ಅಧಿಕೃತವಾಗಿ ಘೋಷಣೆ ಮಾಡುವುದನ್ನೇ ಕಾಯುತ್ತಿದೆ. ಆ ಘೋಷಣೆ ಸದ್ಯದಲ್ಲೇ ಹೊರಬೀಳಲಿದೆ.