ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಗಾಯಗೊಂಡು, ಇದೀಗ ಐಸಿಯುವಿನಲ್ಲಿ ಚಿಕಿತ್ಸೆ ಪಡೆದು ವಾರ್ಡ್‌ಗೆ ಸ್ಥಳಾಂತರಿಸಿದ ನಂತರ ಭಾರತದ ODI ಉಪನಾಯಕ ಶ್ರೇಯಸ್ ಅಯ್ಯರ್ ಅವರ ಆರೋಗ್ಯದ ಸ್ಥಿತಿ ಬಗ್ಗೆ ಮಹತ್ವದ ಬುಲೆಟಿನ್ ಹೊರಬೀಳುವ ಸಾಧ್ಯತೆಯಿದೆ.
ಭಾರತದ ಶ್ರೇಯಸ್ ಅಯ್ಯರ್ (ಸಿ) ಆಸ್ಟ್ರೇಲಿಯಾದ ಅಲೆಕ್ಸ್ ಕ್ಯಾರಿಯನ್ನು ಔಟ್ ಮಾಡಲು ಕ್ಯಾಚ್ ತೆಗೆದುಕೊಳ್ಳುವಾಗ ನೆಲದ ಮೇಲೆ ಬಿದ್ದಾಗ, ಕೈಯಲ್ಲಿದ್ದ ಬಾಲ್ ಅವರ ಎದೆ ಭಾಗಕ್ಕೆ ಜೋರಾಗಿ ಒತ್ತಿದೆ. ಇದರಿಂದ ಇಂಟರ್‌ನಲ್ ಬ್ಲೀಡಿಂಗ್ ಆಗಿ, ಶ್ರೇಯಸ್ ಅಯ್ಯರ್ ಸ್ಥಿತಿ ಗಂಭೀರವಾಗಿತ್ತು. ಇದೀಗ ಐಸಿಯುವಿನಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡು ವಾರ್ಡ್‌ಗೆ ಸ್ಥಳಾಂತರಿಸುವ ಶ್ರೇಯಸ್ ಆರೋಗ್ಯದ ಬಗ್ಗೆ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.
ಅಯ್ಯರ್ ಅವರ ಪೋಷಕರು ಸಿಡ್ನಿಗೆ ಆಗಮಿಸಿದ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿವರವಾದ ವೈದ್ಯಕೀಯ ಬುಲೆಟಿನ್ ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಕ್ರಿಕೆಟಿಗರು ನಿಕಟ ವೈದ್ಯಕೀಯ ಮೇಲ್ವಿಚಾರಣೆಯಲ್ಲಿರುವುದರಿಂದ ಅಯ್ಯರ್ ಅವರ ಕುಟುಂಬ ಸದಸ್ಯರು ಶೀಘ್ರದಲ್ಲೇ ಪ್ರಯಾಣಿಸಲು ತಯಾರಿ ನಡೆಸುತ್ತಿದ್ದಾರೆ ಎಂಬ ವರದಿಯಿದೆ.
ಅಯ್ಯರ್ ಅವರ ಪೋಷಕರು ಆದಷ್ಟು ಬೇಗ ಸಿಡ್ನಿ ತಲುಪಲು ತುರ್ತು ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.