Publish Date: Wed, 01 Apr 2020 (09:29 IST)
Updated Date: Wed, 01 Apr 2020 (09:31 IST)
ಮುಂಬೈ: ಕೊರೋನಾ ಲಾಕ್ ಡೌನ್ ನಿಂದಾಗಿ ಐಪಿಎಲ್ ಅನಿಶ್ಚಿತತೆಯಲ್ಲಿದೆ. ಆದರೆ ಈ ಶ್ರೀಮಂತ ಕ್ರೀಡಾಕೂಟವನ್ನು ರದ್ದು ಮಾಡಲು ಬಿಸಿಸಿಐಗೆ ಮನಸ್ಸಿಲ್ಲ. ರದ್ದು ಮಾಡದೇ ಬೇರೆ ವಿಧಿಯಿಲ್ಲ ಎನ್ನುವ ಸ್ಥಿತಿ ಬಿಸಿಸಿಐಯದ್ದಾಗಿದೆ.
ಹೀಗಾಗಿ ಐಪಿಎಲ್ ರದ್ದು ಎಂದು ಘೋಷಿಸಲು ಬಿಸಿಸಿಐ ಮೀನ ಮೇಷ ಎಣಿಸುತ್ತಿದೆ. ಸಾವಿರಾರು ಕೋಟಿ ಆದಾಯ ಬರುವ ಕ್ರೀಡಾಕೂಟವನ್ನು ಅಷ್ಟು ಸುಲಭವಾಗಿ ರದ್ದು ಮಾಡಲು ಯಾರು ತಾನೇ ಬಯಸುತ್ತಾರೆ?
ಇದೇ ಕಾರಣಕ್ಕೆ ಈ ವರ್ಷ ಜೂನ್ ಬಳಿಕ ಕೆಲವೊಂದು ಸರಣಿಗಳು ರದ್ದಾದರೆ ಆ ಸಮಯವನ್ನು ಲಾಭ ಮಾಡಿಕೊಂಡು ಐಪಿಎಲ್ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ. ಕೆಲವು ರಾಷ್ಟ್ರಗಳು ಪ್ರವಾಸ ನಿರ್ಬಂಧ ಆರು ತಿಂಗಳಿಗೆ ವಿಸ್ತರಿಸಿವೆ. ಇದರಿಂದಾಗಿ ಕೆಲವು ಕ್ರಿಕೆಟ್ ಸರಣಿಗಳು ನಡೆಯದು. ಆ ವೇಳೆಯಲ್ಲಿ ದೇಸೀ ಆಟಗಾರರನ್ನು ಇಟ್ಟುಕೊಂಡಾದರೂ ಸರಿಯೇ ಐಪಿಎಲ್ ನಡೆಸಿದರೂ ಅಚ್ಚರಿಯಿಲ್ಲ.