Select Your Language

Notifications

webdunia
webdunia
webdunia
webdunia

ಕೊರೋನಾ ಇಫೆಕ್ಟ್: ಆಸ್ಟ್ರೇಲಿಯಾ ಕ್ರಿಕೆಟ್ ನಾಯಕ ಟಿಮ್ ಪೇಯ್ನ್ ಕ್ರೆಡಿಟ್ ಕಾರ್ಡ್ ಕಳವು

ಟಿಮ್ ಪೇಯ್ನ್
ಸಿಡ್ನಿ , ಮಂಗಳವಾರ, 31 ಮಾರ್ಚ್ 2020 (09:45 IST)
ಸಿಡ್ನಿ: ಕೊರೋನಾ ಸಂದರ್ಭದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಟಿಮ್ ಪೇಯ್ನ್ ಹೊಸ ಸಂಕಟಕಕ್ಕೆ ಸಿಲುಕಿದ್ದಾರೆ. ತಮ್ಮ ಕಾರಿನಲ್ಲಿಟ್ಟಿದ್ದ ಕ್ರೆಡಿಟ್ ಕಾರ್ಡ್ ಕಳ್ಳತನವಾಗಿ ಪೀಕಲಾಟ ಅನುಭವಿಸಿದ್ದಾರೆ.


ಕೊರೋನಾದಿಂದಾಗಿ ಹೊರಗಡೆ ಜಿಮ್ ಗೆ ತೆರಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಾರು ನಿಲುಗಡೆ ಸ್ಥಳದಲ್ಲಿ ವ್ಯಾಯಾಮ ಮಾಡಲು ಜಾಗ ತೆರವುಗೊಳಿಸುವ ಉದ್ದೇಶದಿಂದ ಕಾರನ್ನು ಹೊರಗಡೆ ನಿಲ್ಲಿಸಿದ್ದರು.

ಈ ವೇಳೆ ಖದೀಮರು ಅವರ ಕಾರಿನ ಗಾಜು ಒಡೆದು ಕ್ರೆಡಿಟ್ ಕಾರ್ಡ್ ಹಾಗೂ ಮತ್ತಿತರ ಅಮೂಲ್ಯ ದಾಖಲೆ ಪತ್ರಗಳನ್ನು ಹೊತ್ತೊಯ್ದಿದ್ದಾರಂತೆ. ಬಹುಶಃ ಹಸಿವು ನೀಗಿಸಿಕೊಳ್ಳಲು ಈ ಕೆಲಸ ಮಾಡಿರಬಹುದು ಎಂದು ಪೇಯ್ನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ಕೊರೋನಾಗೆ ಪರಿಹಾರ ದೇಣಿಗೆ ನೀಡಲು ಮುಂದಾದ ವಿರಾಟ್ ಕೊಹ್ಲಿ ದಂಪತಿ