Publish Date: Mon, 30 Mar 2020 (09:55 IST)
Updated Date: Mon, 30 Mar 2020 (09:56 IST)
ಮುಂಬೈ: ಕೊರೋನಾವೈರಸ್ ನಿಂದಾಗಿ ದೇಶವಿಡೀ ಲಾಕ್ ಡೌನ್ ಆಗಿರುವ ಹಿನ್ನೆಯಲ್ಲಿ ಮುಂದೂಡಲ್ಪಟ್ಟಿದ್ದ ಐಪಿಎಲ್ 13 ನೇ ಆವೃತ್ತಿ ರದ್ದಾಗುವ ಸಾಧ‍್ಯತೆಯಿದೆ.
ಮಾರ್ಚ್ 29 ರಿಂದ ಆರಂಭವಾಗಬೇಕಿದ್ದ ಐಪಿಎಲ್ ನ್ನು ಏಪ್ರಿಲ್ 15 ರವರೆಗೆ ಮುಂದೂಡಲಾಗಿತ್ತು. ಆದರೆ ಅಲ್ಲಿಯವರೆಗೆ ಲಾಕ್ ಡೌನ್ ಜಾರಿಯಲ್ಲಿರಲಿದೆ. ಸದ್ಯದ ಪರಿಸ್ಥಿತಿ ಗಮನಿಸಿದರೆ ಲಾಕ್ ಡೌನ್ ಮುಂದುವರಿದರೂ ಅಚ್ಚರಿಯಿಲ್ಲ.
ಇದರ ಬಳಿಕ ಐಪಿಎಲ್ ನಡೆಸಲು ವೇಳಾಪಟ್ಟಿ ಹೊಂದಿಸಲು ಕಷ್ಟವಾಗಲಿದೆ. ಹೀಗಾಗಿ ಐಪಿಎಲ್ ರದ್ದಾಗಲಿದ್ದು, ಸದ್ಯದಲ್ಲೇ ಬಿಸಿಸಿಐ ಘೋಷಣೆ ಮಾಡುವ ಸಾಧ್ಯತೆಯಿದೆ.