Publish Date: Sun, 29 Mar 2020 (09:11 IST)
Updated Date: Sun, 29 Mar 2020 (09:13 IST)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಿರ್ದೇಶಕರಾಗಿರುವ ನ್ಯೂಜಿಲೆಂಡ್ ಮಾಜಿ ನಾಯಕ ಮೈಕ್ ಹಸನ್ ಈಗ ಕನ್ನಡ ಕಲಿಯುತ್ತಿದ್ದಾರಂತೆ!
ಐಪಿಎಲ್ ಗಾಗಿ ಭಾರತಕ್ಕೆ ಬಂದಿಳಿದಿದ್ದ ಮೈಕ್ ಲಾಕ್ ಡೌನ್ ನಿಂದಾಗಿ ಇಲ್ಲಿಯೇ ಉಳಿದುಕೊಂಡಿದ್ದಾರೆ. ಇದೀಗ ಆರ್ ಸಿಬಿಗೆ ಕೋಚಿಂಗ್ ಮಾಡುವ ಮೊದಲು ಇಲ್ಲಿನ ಕೆಲವು ಪ್ರಾದೇಶಿಕ ಭಾಷೆಗಳನ್ನು ಕಲಿಯಲು ಪ್ರಯತ್ನಿಸುತ್ತಿದ್ದಾರಂತೆ.
ಸದ್ಯಕ್ಕೆ ಪ್ರಾಕ್ಟೀಸ್ ಇಲ್ಲ. ಹೀಗಾಗಿ ಹಿಂದಿ, ಕನ್ನಡದಂತಹ ಭಾರತೀಯ ಭಾಷೆಗಳನ್ನು ಕಲಿಯುತ್ತಿದ್ದೇನೆ ಎಂದು ಮೈಕ್ ಹೇಳಿದ್ದಾರೆ. ವಿಪರ್ಯಾಸವೆಂದರೆ ಆರ್ ಸಿಬಿ ತಂಡದಲ್ಲಿ ಕನ್ನಡಿಗರಿಗೆ ಪ್ರಾತಿನಿಧ್ಯವಿಲ್ಲ.