ಐಪಿಎಲ್ ರದ್ದು ಸಾಧ್ಯತೆ: ಸೌರವ್ ಗಂಗೂಲಿ ಸುಳಿವು

ಬುಧವಾರ, 25 ಮಾರ್ಚ್ 2020 (10:00 IST)
ಮುಂಬೈ: ಕೊರೋನಾವೈರಸ್ ನಿಂದಾಗಿ ಮಾರ್ಚ್ 29 ರಂದು ಆರಂಭವಾಗಬೇಕಿದ್ದ ಐಪಿಎಲ್ ಅನಿಶ್ಚಿತತೆಯಲ್ಲಿದೆ. ಈ ನಡುವೆ ಸೌರವ್ ಗಂಗೂಲಿ ಹೇಳಿದ್ದೇನು ಗೊತ್ತಾ?


ನಿನ್ನೆಯವರೆಗೆ ತಡವಾಗಿಯಾದದರೂ ಐಪಿಎಲ್ ಆರಂಭವಾಗಬಹುದು ಎಂಬ ಭರವಸೆಯಿತ್ತು. ಆದರೆ ಇದೀಗ ಪ್ರಧಾನಿ ಮೋದಿ 21 ದಿನಗಳ ಲಾಕ್ ಡೌನ್ ಗೆ ಆದೇಶಿಸಿರುವುದರಿಂದ ಐಪಿಎಲ್ ರದ್ದಾಗುವ ಸಾಧ್ಯತೆ ಹೆಚ್ಚಿದೆ.

ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಕೇಳಿದಾಗ ‘ನನ್ನಲ್ಲಿ ಈ ಪ್ರಶ್ನೆಗೆ ಉತ್ತರವಿಲ್ಲ. ಸದ್ಯಕ್ಕೆ ಯಾವುದನ್ನೂ ಹೇಳುವ ಸ್ಥಿತಿಯಲ್ಲಿಲ್ಲ. ಭವಿಷ್ಯದ ಟೂರ್ನಿಗಳನ್ನು ಮುಂದೂಡಿ ಐಪಿಎಲ್ ನಡೆಸಲಾಗದು. ಐಪಿಎಲ್ ನಿಂದ ಆಗುವ ನಷ್ಟವನ್ನು ತುಂಬುವುದು ಹೇಗೆ ಎನ್ನುವುದೂ ಗೊತ್ತಿಲ್ಲ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪ್ರಧಾನಿ ಮೋದಿಯ 21 ದಿನಗಳ ಕರ್ಫ್ಯೂ ಆದೇಶಕ್ಕೆ ವಿರಾಟ್ ಕೊಹ್ಲಿ ಹೇಳಿದ್ದೇನು ಗೊತ್ತಾ?