Select Your Language

Notifications

webdunia
webdunia
webdunia
webdunia

ಪರಿಹಾರ ದೇಣಿಗೆ ನೀಡಲು ಪ್ರಧಾನಿ ಮನವಿ: 51 ಕೋಟಿ ಕೊಡುಗೆ ನೀಡಿದ ಬಿಸಿಸಿಐ

ಪರಿಹಾರ ದೇಣಿಗೆ ನೀಡಲು ಪ್ರಧಾನಿ ಮನವಿ: 51 ಕೋಟಿ ಕೊಡುಗೆ ನೀಡಿದ ಬಿಸಿಸಿಐ
ಮುಂಬೈ , ಭಾನುವಾರ, 29 ಮಾರ್ಚ್ 2020 (09:19 IST)
ಮುಂಬೈ: ಕೊರೋನಾವೈರಸ್ ವಿರುದ್ಧ ನಡೆಯುತ್ತಿರುವ ಸರ್ಕಾರದ ಹೋರಾಟದಲ್ಲಿ ಕೈ ಜೋಡಿಸಲು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನಿಮ್ಮ ಕೈಲಾದಷ್ಟು ಧನಸಹಾಯ ನೀಡಿ ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.


ಒಂದು ರೂಪಾಯಿಯಾದರೂ ಸರಿಯೇ. ಹನಿ ಹನಿಗೂಡಿದರೆ ಹಳ್ಳ ಎಂಬಂತೆ ಎಷ್ಟು ಸಾಧ‍್ಯವೋ ಅಷ್ಟು ದೇಣಿಗೆ ನೀಡಿ. ಇದನ್ನು ಕೊರೋನಾ ಪರಿಹಾರಕ್ಕೆ ಮತ್ತು ಮುಂದೆ ಬರುವ ಇಂತಹ ವಿಪತ್ತುಗಳ ನಿರ್ವಹಣೆಗೆ ಬಳಸುತ್ತೇವೆ ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.

ಈ ನಡುವೆ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿಕೊಂಡಿರುವ ಬಿಸಿಸಿಐ ಪ್ರಧಾನಿ ಪರಿಹಾರ ನಿಧಿಗೆ 50 ಕೋಟಿ ರೂ. ದೇಣಿಗೆ ನೀಡಿದೆ. ಇದಕ್ಕೂ ಮೊದಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ 50 ಲಕ್ಷ ಮೌಲ್ಯದ ಅಕ್ಕಿ ವಿತರಿಸಿದ್ದರು. ಕ್ರಿಕೆಟ್ ದಿಗ್ಗಜ ಸಚಿನ್ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ತಲಾ 25 ಲಕ್ಷ ರೂ.ಗಳ ದೇಣಿಗೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಕಲಿಯುತ್ತಿರುವ ಆರ್ ಸಿಬಿ ಕೋಚ್ ಮೈಕ್ ಹಸನ್