Publish Date: Sat, 28 Mar 2020 (09:26 IST)
Updated Date: Sat, 28 Mar 2020 (09:28 IST)
ಬೆಂಗಳೂರು: ಕೊರೋನಾವೈರಸ್ ನಿಂದಾಗಿ ದೇಶದಲ್ಲೆಡೆ ಕರ್ಫ್ಯೂ ಇರುವಾಗ ಯುಗಾದಿ ಹಬ್ಬ ಆಚರಿಸಲು ಸಾಧ‍್ಯವಾಗಿರಲಿಲ್ಲ. ಆದರೆ ನಿಖಿಲ್ ಕುಮಾರಸ್ವಾಮಿ ಭಾವಿ ಪತ್ನಿ ರೇವತಿ ಮನೆಯಲ್ಲಿ ಯುಗಾದಿ ಹಬ್ಬ ಆಚರಿಸಿದ್ದರು.
ಲಾಕ್ ಡೌನ್ ಆಗಿರುವಾಗ ಎಲ್ಲರೂ ಮನೆಯಲ್ಲೇ ಇರಬೇಕು. ಅದನ್ನು ಉಲ್ಲಂಘಿಸಿ ನಿಖಿಲ್ ರೇವತಿ ಮನೆಗೆ ತೆರಳಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿತ್ತು.
ಇದೀಗ ನಿಖಿಲ್ ಕರ್ಫ್ಯೂ ನಿಯಮ ಉಲ್ಲಂಘಿಸಿದ್ದಕ್ಕೆ ಕ್ಷಮೆ ಕೋರಿದ್ದಾರೆ. ನಾನು ಆವತ್ತು ಹಾಗೆ ಮಾಡಬಾರದಿತ್ತು. ಅದನ್ನು ನಾನು ಮುಚ್ಚಿಟ್ಟಿರಲಿಲ್ಲ. ಫೋಟೋ ಕೂಡಾ ಹಾಕಿಕೊಂಡಿದ್ದೆ. ಆದರೆ ಇನ್ನು ಮುಂದೆ ಹಾಗೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ನಿಖಿಲ್ ಕ್ಷಮೆ ಕೋರಿದ್ದಾರೆ.