Select Your Language

Notifications

webdunia
webdunia
webdunia
webdunia

ಮನೆಯಲ್ಲೇ ನಡೆಯಲಿದೆ ನಿಖಿಲ್ ಕುಮಾರಸ್ವಾಮಿ ಕಲ್ಯಾಣ?

ಮನೆಯಲ್ಲೇ ನಡೆಯಲಿದೆ ನಿಖಿಲ್ ಕುಮಾರಸ್ವಾಮಿ ಕಲ್ಯಾಣ?
ಬೆಂಗಳೂರು , ಶನಿವಾರ, 28 ಮಾರ್ಚ್ 2020 (09:23 IST)
ಬೆಂಗಳೂರು: ಕೊರೋನಾವೈರಸ್ ನಿಂದಾಗಿ ಇಡೀ ದೇಶವೇ ಲಾಕ್ ಡೌನ್ ಆಗಿದ್ದು, ಯಾವುದೇ ಸಭೆ-ಸಮಾರಂಭ ನಡೆಸುವಂತಿಲ್ಲ. ಹೀಗಾಗಿ ಅದ್ಧೂರಿಯಾಗಿ ನಡೆಸಲು ಉದ್ದೇಶಿಸಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಮದುವೆಯೂ ಅನಿಶ್ಚಿತತೆಯಲ್ಲಿದೆ.


ಈ ಬಗ್ಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನಿಖಿಲ್, ಮದುವೆ ಏಪ್ರಿಲ್ 17 ರಂದು ನಿಗದಿಯಾಗಿದೆ. ಆ ಸಮಯದಲ್ಲಿ ಎಲ್ಲವೂ ಸರಿಯಾಗಬಹುದು ಎಂದು ನಿರೀಕ್ಷಿಸೋಣ.

ಒಂದು ವೇಳೆ ಸರಿಯಾಗದೇ ಇದ್ದರೂ ಈಗಿನ ಪ್ರಕಾರ ನಿಗದಿತ ದಿನಾಂಕದಲ್ಲೇ ಮದುವೆ ನಡೆಯಲಿದೆ. ಆದರೆ ಛತ್ರದಲ್ಲಿ ಸಾಧ್ಯವಾಗದೇ ಇದ್ದರೆ ಮನೆಯಲ್ಲೇ ಸರಳವಾಗಿ ನಡೆಯಬಹುದು ಎಂದು ಸುಳಿವು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ವಾರಕ್ಕೆ ಪ್ರಸಾರ ನಿಲ್ಲಿಸಲಿರುವ ಧಾರವಾಹಿಗಳು