Publish Date: Fri, 27 Mar 2020 (10:39 IST)
Updated Date: Fri, 27 Mar 2020 (10:40 IST)
ಬೆಂಗಳೂರು: ಕೊರೋನಾದಿಂದಾಗಿ ಇಡೀ ಚಿತ್ರರಂಗವೇ ಸ್ತಬ್ಧವಾಗಿದೆ. ಆದರೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಸಿನಿಮಾ ತಂಡ ಮಾತ್ರ ಸುಮ್ಮನೇ ಕುಳಿತಿಲ್ಲ.
ಕೊರೋನಾ ಸಮಯದಲ್ಲೂ ರಕ್ಷಿತ್ ಆಂಡ್ ಬಳಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಚಿತ್ರೀಕರಣ ನಡೆಸಲು ಸಾಧ್ಯವಾಗದೇ ಇದ್ದರೇನಂತೆ? ಉಳಿದ ಕೆಲಸಗಳನ್ನು ಮಾಡಬಹುದಲ್ಲವೇ?
ಇದೇ ಕಾರಣಕ್ಕೆ ನಿರ್ದೇಶಕ ಕಿರಣ್ ರಾಜ್ ತಮ್ಮ ಬಳಗದವರ ಜತೆ ಹಾಡುಗಳಿಗೆ ಸಾಹಿತ್ಯ ಬರೆಯುವುದು ಮತ್ತು ಇತರ ಭಾಷೆಗಳಿಗೆ ಡೈಲಾಗ್ ಬರೆಯುವುದರಲ್ಲಿ ತಲ್ಲೀನವಾಗಿದೆ.