Publish Date: Sat, 28 Mar 2020 (09:38 IST)
Updated Date: Sat, 28 Mar 2020 (09:39 IST)
ಬೆಂಗಳೂರು: ಕೊರೋನಾವೈರಸ್ ನಿಂದಾಗಿ ಬಡವರಿಗೆ ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದಂತಾಗಿದೆ. ಹೀಗಾಗಿ ಬಡವರಿಗೆ ನೆರವಾಗಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನವಿ ಮಾಡಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ದರ್ಶನ್, ‘ಈ ಸಮಯದಲ್ಲಿ ನಾನು ಸಣ್ಣದೊಂದು ಸಲಹೆ ನೀಡಲು ಬಯಸುತ್ತೇನೆ. ದಿನನಿತ್ಯ ನೀವು ಮಾಡುವ ಅಡುಗೆಯಲ್ಲಿ ಸ್ವಲ್ಪ ಹೆಚ್ಚು ಜನರಿಗಾಗುವಂತೆ ಮಾಡಿ ನಿಮ್ಮ ಅಕ್ಕಪಕ್ಕದ ಬಡಜನರಿಗೆ ಒಪ್ಪೊತ್ತು ಕೂಳಿಗಾದರೂ ನೆರವಾದರೆ ಒಳಿತು ಎಂಬುದು ನನ್ನ ಭಾವನೆ. ಸಾಧ‍್ಯವಾದಷ್ಟು ನಿಮ್ಮ ಕೈಲಾಗುವ ಈ ಕೆಲಸದಿಂದ ಅನೇಕ ಕುಟುಂಬಗಳು ಚೇತರಿಸಿಕೊಳ್ಳಬಹುದು. ಒಟ್ಟಿಗೆ ಕೊರೋನಾವೈರಸ್ ವಿರುದ್ಧ ಹೋರಾಡೋಣ’ ಎಂದು ಮನವಿ ಮಾಡಿದ್ದಾರೆ.
ಈಗಾಗಲೇ ದರ್ಶನ್ ಅಭಿಮಾನಿ ಬಳಗ ಮೈಸೂರಿನಲ್ಲಿ ಬಡಕುಟುಂಬಗಳಿಗೆ ಅನ್ನದಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಅದರ ಜತೆಗೆ ದರ್ಶನ್ ಅಭಿಮಾನಿಗಳಿಗೂ ಖುದ್ದಾಗಿ ಈ ರೀತಿ ಮನವಿ ಮಾಡಿದ್ದಾರೆ.