Select Your Language

Notifications

webdunia
webdunia
webdunia
webdunia

ಯುಎಇನಲ್ಲಿ ಟಿ20 ವಿಶ್ವಕಪ್: ಬಿಸಿಸಿಐಗೆ ಐಸಿಸಿ ಗ್ರೀನ್ ಸಿಗ್ನಲ್

ಯುಎಇನಲ್ಲಿ ಟಿ20 ವಿಶ್ವಕಪ್: ಬಿಸಿಸಿಐಗೆ ಐಸಿಸಿ ಗ್ರೀನ್ ಸಿಗ್ನಲ್
ಮುಂಬೈ , ಬುಧವಾರ, 30 ಜೂನ್ 2021 (09:18 IST)
ಮುಂಬೈ: ಪುರುಷರ ಟಿ20 ವಿಶ್ವಕಪ್ ಕ್ರಿಕೆಟ್ ಕೂಟ ಈ ಬಾರಿ ಯುಎಇನಲ್ಲಿ ಆಯೋಜಿಸುವ ಬಿಸಿಸಿಐ ಪ್ರಸ್ತಾವಕ್ಕೆ ಐಸಿಸಿ ಒಪ್ಪಿಗೆ ನೀಡಿದೆ.


ಭಾರತದಲ್ಲಿ ಕೊರೋನಾ ಪರಿಸ್ಥಿತಿಯಿಂದಾಗಿ ಕೂಟ ಆಯೋಜಿಸುವುದು ಅಸಾಧ್ಯವಾಗಿತ್ತು. ಹೀಗಾಗಿ ಈ ಬಾರಿಯ ಆತಿಥ್ಯ ವಹಿಸಿಕೊಂಡಿರುವ ಬಿಸಿಸಿಐ ಕೂಟವನ್ನು ಯುಎಇನಲ್ಲಿ ಆಯೋಜಿಸಲು ನಿರ್ಧರಿಸಿತ್ತು. ಇದನ್ನೀಗ ಐಸಿಸಿ ಅನುಮೋದಿಸಿದೆ.

ಇದರೊಂದಿಗೆ ಯುಎಇನಲ್ಲಿ ಪ್ರತಿಷ್ಠಿತ ಕೂಟ ನಡೆಯುವುದು ಪಕ್ಕಾ ಆಗಿದೆ. ಅಕ್ಟೋಬರ್ 17 ರಿಂದ ನವಂಬರ್ 14 ರವರೆಗೂ ಟೂರ್ನಮೆಂಟ್ ನಡೆಯಲಿದೆ. ದುಬೈ, ಅಬುದಾಬಿ ಮತ್ತು ಶಾರ್ಜಾ ಮತ್ತು ಒಮನ್ ಕ್ರಿಕೆಟ್ ಅಕಾಡೆಮಿ ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ.

ಈಗಾಗಲೇ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಟೀಂ ಇಂಡಿಯಾ ಬಿ ಗುಂಪಿನಲ್ಲಿದೆ. ಅರ್ಹತಾ ಸುತ್ತು ಆಡಲಿರುವ ಎಂಟು ಹೊಸ ತಂಡಗಳು ಅರ್ಹತಾ ಪಂದ್ಯಗಳಲ್ಲಿ ಆಡಿ ಬಳಿಕ ಸೂಪರ್ 12 ತಂಡಗಳ ಪಟ್ಟಿಗೆ ಸೇರ್ಪಡೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುಎಇನಲ್ಲಿ ಐಸಿಸಿ ಟಿ20 ವಿಶ್ವಕಪ್: ಅಧಿಕೃತ ಘೋಷಣೆ ಸದ್ಯದಲ್ಲೇ