Select Your Language

Notifications

webdunia
webdunia
webdunia
webdunia

ಡ್ಯಾನ್ಸ್ ಮಾಡಿದ್ರೆ ಟ್ರೋಫಿ ಬರಲ್ಲ! ಕೊಹ್ಲಿ ವಿರುದ್ಧ ಫ್ಯಾನ್ಸ್ ಗರಂ

ಡ್ಯಾನ್ಸ್ ಮಾಡಿದ್ರೆ ಟ್ರೋಫಿ ಬರಲ್ಲ! ಕೊಹ್ಲಿ ವಿರುದ್ಧ ಫ್ಯಾನ್ಸ್ ಗರಂ
ಸೌಥಾಂಪ್ಟನ್ , ಶುಕ್ರವಾರ, 25 ಜೂನ್ 2021 (09:31 IST)
ಸೌಥಾಂಪ್ಟನ್: ನ್ಯೂಜಿಲೆಂಡ್ ವಿರುದ್ಧ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಸೋತ ಬಳಿಕ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಅಭಿಮಾನಿಗಳ ಆಕ್ರೋಶ ಮಿತಿ ಮೀರಿದೆ.


ಇದುವರೆಗೆ ಒಂದೇ ಒಂದು ಐಸಿಸಿ ಟ್ರೋಫಿ ಗೆಲ್ಲಲಾಗದ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಅಭಿಮಾನಿಗಳು ವಿವಿಧ ಮೆಮೆಗಳ ಮೂಲಕ ತಪರಾಕಿ ನೀಡಿದ್ದಾರೆ. ಡ್ಯಾನ್ಸ್ ಮಾಡಿದ್ರೆ, ಮೈದಾನದಲ್ಲಿ ಕಿತ್ತಾಡಿದ್ರೆ ಟ್ರೋಫಿ ಬರಲ್ಲ ಎಂದು ಕೊಹ್ಲಿ ಫೈನಲ್ಸ್ ನಲ್ಲಿ ಡ್ಯಾನ್ಸ್ ಮಾಡಿ ಪ್ರೇಕ್ಷಕರನ್ನು ರಂಜಿಸಿದ್ದನ್ನೇ ವ್ಯಂಗ್ಯ ಮಾಡಿದ್ದಾರೆ.

ಇನ್ನು, ಹಲವರು ಧೋನಿ ನಾಯಕತ್ವವನ್ನು ನೆನೆಸಿಕೊಂಡಿದ್ದಾರೆ. 2013 ರಲ್ಲಿ ಧೋನಿ ನಾಯಕತ್ವದಲ್ಲಿ ಗೆದ್ದಿದ್ದೇ ಕೊನೆ, ಅದಾದ ಬಳಿಕ ಕೊಹ್ಲಿ ನಾಯಕರಾಗಿ ಟೀಂ ಇಂಡಿಯಾ ಒಂದೂ ಐಸಿಸಿ ಟ್ರೋಫಿಯಲ್ಲಿ ಯಶಸ್ಸು ಕಂಡಿಲ್ಲ. ಹೀಗಾಗಿ ಧೋನಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಕೊಹ್ಲಿ ನಾಯಕರಾಗಲು ಲಾಯಕ್ಕಲ್ಲ ಎಂದು ಜರೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಸಿಸಿ ಕೂಟದ ಫೈನಲ್ಸ್ ನಲ್ಲಿ ಮುಂದುವರಿದ ವಿರಾಟ್ ಕೊಹ್ಲಿ ದುರಾದೃಷ್ಟ