Publish Date: Thu, 24 Jun 2021 (09:18 IST)
Updated Date: Thu, 24 Jun 2021 (09:18 IST)
ಸೌಥಾಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು 8 ವಿಕೆಟ್ ಗಳಿಂದ ಗೆದ್ದುಕೊಂಡ ನ್ಯೂಜಿಲೆಂಡ್ ಮೊದಲ ಬಾರಿಗೆ ಐಸಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಟೀಂ ಇಂಡಿಯಾ ದ್ವಿತೀಯ ಇನಿಂಗ್ಸ್ ನಲ್ಲಿ 170 ರನ್ ಗಳಿಗೆ ಆಲೌಟ್ ಆಗಿತ್ತು. ದ್ವಿತೀಯ ಸರದಿಯಲ್ಲೂ ಬ್ಯಾಟಿಂಗ್ ಕುಸಿತಕ್ಕೊಳಗಾದ ಟೀಂ ಇಂಡಿಯಾ ಎದುರಾಳಿಗೆ 139 ರನ್ ಗಳ ಸುಲಭದ ಗುರಿ ನೀಡಿತು.
ಈ ಮೊತ್ತ ಬೆನ್ನತ್ತಿದ ನ್ಯೂಜಿಲೆಂಡ್ 2 ವಿಕೆಟ್ ಕಳೆದುಕೊಂಡು 140 ರನ್ ಗಳಿಸುವ ಮೂಲಕ ಚಾಂಪಿಯನ್ ಶಿಪ್ ಪಟ್ಟ ತನ್ನದಾಗಿಸಿಕೊಂಡಿತು. ಕಳೆದ ಬಾರಿ ಏಕದಿನ ವಿಶ್ವಕಪ್ ಫೈನಲ್ ತಲುಪಿದ್ದರೂ ದುರದೃಷ್ಟವಶಾತ್ ಸೂಪರ್ ಓವರ್ ನಲ್ಲಿ ಸೋತಿತ್ತು. ಆದರೆ ಈ ಬಾರಿ ಕಿವೀಸ್ ಆರಂಭದಿಂದಲೂ ಅತ್ಯುತ್ತಮ ಆಟ ಪ್ರದರ್ಶಿಸಿ ಟೀಂ ಇಂಡಿಯಾವನ್ನು ಸೋಲಿಸಿ ಟೆಸ್ಟ್ ಕ್ರಿಕೆಟ್ ಗೆ ಚಾಂಪಿಯನ್ ಎನಿಸಿಕೊಂಡಿತು.