Publish Date: Wed, 23 Jun 2021 (10:09 IST)
Updated Date: Wed, 23 Jun 2021 (10:11 IST)
ಸೌಥಾಂಪ್ಟನ್: ಟೀಂ ಇಂಡಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಅಭಿಮಾನಿಯೊಬ್ಬರು ಗಾಯಗೊಳ್ಳಲು ಕಾರಣರಾಗಿದ್ದಾರೆ.
ಐದನೇ ದಿನದಾಟದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಸೌಥಿ ಸಿಕ್ಸರ್ ಸಿಡಿಸಿದ ರಭಸಕ್ಕೆ ಚೆಂಡು ಪ್ರೇಕ್ಷಕರ ಗ್ಯಾಲರಿಗೆ ಹೋಗಿ ಬಿದ್ದಿದೆ. ಇದು ಅಲ್ಲಿ ಕೂತಿದ್ದ ಅಭಿಮಾನಿಯ ಕಣ್ಣಿನ ಕೆಳ ಭಾಗಕ್ಕೆ ಬಡಿದಿದ್ದು, ಗಾಯವಾಗಿ ರಕ್ತ ಸುರಿದಿದೆ.
46 ಎಸೆತಗಳಿಂದ 30 ರನ್ ಚಚ್ಚಿದ್ದ ಟಿಮ್ ಸೌಥಿ ನ್ಯೂಜಿಲೆಂಡ್ ಗೆ ಮಹತ್ವದ ಮುನ್ನಡೆ ಗಳಿಸಿಕೊಡಲು ಪ್ರಧಾನ ಪಾತ್ರ ವಹಿಸಿದ್ದರು. ಇಷ್ಟೇ ಅಲ್ಲದೆ, ಬೌಲಿಂಗ್ ನಲ್ಲೂ ದಿನದಂತ್ಯಕ್ಕೆ ರೋಹಿತ್ ಶರ್ಮಾರ ಮಹತ್ವ ವಿಕೆಟ್ ತಮ್ಮದಾಗಿಸಿಕೊಂಡಿದ್ದರು.