Select Your Language

Notifications

webdunia
webdunia
webdunia
webdunia

ಸೌರವ್ ಗಂಗೂಲಿಗೆ ಇಂದು ಬೆಳ್ಳಿ ಹಬ್ಬದ ಸಂಭ್ರಮ

ಸೌರವ್ ಗಂಗೂಲಿಗೆ ಇಂದು ಬೆಳ್ಳಿ ಹಬ್ಬದ ಸಂಭ್ರಮ
ಮುಂಬೈ , ಮಂಗಳವಾರ, 22 ಜೂನ್ 2021 (10:12 IST)
ಮುಂಬೈ: ಬಿಸಿಸಿಐ ಅಧ್ಯಕ್ಷ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿಗೆ ಇಂದು ಬೆಳ್ಳಿ ಹಬ್ಬದ ಸಂಭ್ರಮ. ಯಾವ ಕಾರಣಕ್ಕೆ ಗೊತ್ತಾ?


ಇದೇ ದಿನ 25 ವರ್ಷಗಳ ಹಿಂದೆ ಗಂಗೂಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ವಿಶ್ವ ಕ್ರಿಕೆಟ್ ನಿಬ್ಬೆರಗಾಗುವಂತೆ ಮಾಡಿದ್ದರು. ಅಂದಿನ ಗಂಗೂಲಿ ಶತಕ ಸಾಧನೆಗೆ ಇಂದು ಬೆಳ್ಳಿ ಹಬ್ಬದ ಸಂಭ್ರಮ.

ವಿಶೇಷವೆಂದರೆ ಇದೇ ದಿನ ರಾಹುಲ್ ದ್ರಾವಿಡ್ ಕೂಡಾ ಟೆಸ್ಟ್ ಕ್ರಿಕೆಟ್ ಗೆ ಕಾಲಿಟ್ಟಿದ್ದರು. ಆದರೆ ಅವರು 95 ರನ್ ಗಳಿಸಿ ಸ್ವಲ್ಪದರಲ್ಲೇ ಶತಕ ವಂಚಿತರಾಗಿದ್ದರು. ಇನ್ನೊಂದು ವಿಶೇಷವೆಂದರೆ ಇದೇ ಪಂದ್ಯದಲ್ಲಿ ಕನ್ನಡಿಗ ವೇಗಿ ವೆಂಕಟೇಶ್ ಪ್ರಸಾದ್ 5 ವಿಕೆಟ್ ಕಿತ್ತು ಮಿಂಚಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್, ಮಯಾಂಕ್ ಗೆ ರಿಲೀಫ್ ನೀಡಿದ ಬಿಸಿಸಿಐ